ಕಾಸರಗೋಡು: ನಗರದ ಚಂದ್ರಗಿರಿ ಜಂಕ್ಷನ್‍ನಿಂದ ಚಂದ್ರಗಿರಿ ಸೇತುವೆ ಮೂಲಕ ಕಾಞಂಗಾಡು ತೆರಳುವ ರಸ್ತೆಯ ಶೋಚನೀಯ ಸ್ಥಿತಿಯನ್ನು ನಿವಾರಿಸುವಂತೆ ಒತ್ತಾಯಿಸಿ ಯುವ ಕಾಂಗ್ರೆಸ್ ಉದುಮ ಕ್ಷೇತ್ರ ಸಮಿತಿ ವತಿಯಿಂದ ಚಂದ್ರಗಿರಿ ಸೇತುವೆ ಬಳಿ ರಸ್ತೆ ತಡೆ ಧರಣಿ ನಡೆಸಲಾಯಿತು. ಡಿಸಿಸಿ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಹಕೀಂ ಕುನ್ನಿಲ್ ಧರಣಿ ಉದ್ಘಾಟಿಸಿ ಮಾತನಾಡಿ, ಚಂದ್ರಗಿರಿ ರಸ್ತೆ ಅಭಿವೃದ್ಧಿ ಕಾರ್ಯದಲ್ಲಿ ವ್ಯಾಪಕ ಭ್ರಷ್ಟಾಚಾರದಿಂದ ಕಮಗಾರಿ ಪೂರ್ತಿಗೊಂಡ ಒಂದೇ ದಿನದಲ್ಲಿ ಮತ್ತೆ ರಸ್ತೆ ಶಿಥಿಲಗೊಂಡಿದೆ. ಒಟ್ಟು ಕಾಮಗಾರಿ ಬಗ್ಗೆ ವಿಜಿಲೆನ್ಸ್ ತನಿಖೆ ನಡೆಸುವುದು ಅನಿವಾರ್ಯ ಎಂಬುದಾಗಿ ತಿಳಿಸಿದರು.
ಯುವ ಕಾಂಗ್ರೆಸ್ ಉದುಮ ಕ್ಷೇತ್ರದ ಅಧ್ಯಕ್ಷ ಐ.ಎಸ್.ವಸಂತನ್ ಅಧ್ಯಕ್ಷತೆ ವಹಿಸಿದ್ದರು.ಕೃಷ್ಣನ್ ಚಟ್ಟಂಚಲ್, ಉಣ್ಣಿಕೃಷ್ಣನ್ ಪೆÇಯಿನಾಚಿ, ಮನ್ಸೂರ್ ಕುರಿಕಲ್, ಎನ್ ಬಾಲಚಂದ್ರನ್. ಅನ್ವರ್ ಮಾಙËಡ್, ಗಿರಿಕೃಷ್ಣನ್ ಕೂಡಲ, ಸುಜಿತ್ ಕುಮಾರ್ ತಚ್ಚಂಗಾಡ್, ಸತ್ಯನಾಥನ್ ಪತ್ರವಳಪ್ಪಿಲ್, ವಿ.ವಿ.ಚಂದ್ರನ್, ಪ್ರದೀಪ್ ಪಳ್ಳಕ್ಕಾಡ್, ಹಫೀಝ್ ಚೆಮ್ನಾಡ್, ಕೃಷ್ಣಪ್ರಸಾದ್ ಕಾರಟೇರಿ, ನಾಸೀರ್ ಕೋಳಿಯಡ್ಕ, ಶ್ರೀಜೇಶ್ ಪೆÇಯಿನಾಚಿ, ರತೀಶ್, ಅಬ್ದುಲ್ ಸಲಾಂ ಕಳನಾಡ್, ಗೀತಾ ಬಾಲಕೃಷ್ಣನ್, ಸುಕುಮಾರಿ ಶ್ರೀಧರನ್, ಸಿರಾಜ್ ಕೋಳಿಯಡ್ಕ, ಸಜಿತಾ ರಾಮಕೃಷ್ಣನ್, ಶ್ರೀನಿಶ್ ಬಂದಕೈ, ನಾರಾಯಣನ್ ನಾಯರ್ ಸಿ, ನಿತಿನ್ ರಾಜ್ ಉದುಮ, ರಾಜೇಶ್ ಬೆಳ್ಳಚೇರಿ, ಅಖಿಲೇಶ್ ಕಾರಟೇರಿ, ದಿಲೀಪ್ ಕಿಜೂರ್, ಶ್ರೀರಾಜ್ ಕೆ.ವಿ, ಬಿಜುರಾಜ್ ಕಿಜ್ಜೂರ್ ಮತ್ತು ಇ.ಕೆ.ಶ್ರೀರಾಜ್ ಮೊದಲಾದವರು ಉಪಸ್ಥಿತರಿದ್ದರು.