ಮಣಿಪುರ: ರಾಜ ಭವನದ 100 ಮೀಟರ್ಗೂ ಕಡಿಮೆ ಅಂತರದಲ್ಲಿರುವ ಜಿಪಿ ಮಹಿಳಾ ಕಾಲೇಜಿನ ಗೇಟಿನ ಸಮೀಪ ಸೋಮವಾರ ಬೆಳಿಗ್ಗೆ ಗ್ರೆನೇಡ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಪುರ: ರಾಜ ಭವನದ 100 ಮೀಟರ್ಗೂ ಕಡಿಮೆ ಅಂತರದಲ್ಲಿರುವ ಜಿಪಿ ಮಹಿಳಾ ಕಾಲೇಜಿನ ಗೇಟಿನ ಸಮೀಪ ಸೋಮವಾರ ಬೆಳಿಗ್ಗೆ ಗ್ರೆನೇಡ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ದಾರಿಹೋಕರಲ್ಲಿ ಭಯ ಹುಟ್ಟಿಸಿತ್ತು. ಗ್ರೆನೇಡ್ ಪತ್ತೆಯಾದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಆ ಪ್ರದೇಶಕ್ಕೆ ಯಾರೂ ತೆರಳದಂತೆ ಕ್ರಮ ವಹಿಸಿದ್ದರು.
ರಾಜಭವನದಿಂದ 100 ಮೀಟರ್ ಮತ್ತು ಮುಖ್ಯಮಂತ್ರಿ ಅಧಿಕೃತ ನಿವಾಸ ಹಾಗೂ ಮಣಿಪುರ ಪೊಲೀಸ್ ಪ್ರಧಾನ ಕಚೇರಿಯಿಂದ 300 ಮೀಟರ್ಗೂ ಕಡಿಮೆ ಅಂತರದಲ್ಲಿ ಈ ಕಾಲೇಜು ಇದೆ. ಸ್ಥಳದಲ್ಲಿ 'ಶ್ರಮಜೀವಿ ವಿದ್ಯಾರ್ಥಿಗಳಿಗೆ ಕೀರ್ತಿ' ಎಂಬ ಕೈಬರಹವಿದ್ದ ಚೀಟಿ ಲಭ್ಯವಾಗಿದೆ. ಇಂಫಾಲ ಕಣಿವೆಯ ಹಲವು ಶಿಕ್ಷಣ ಸಂಸ್ಥೆಗಳು ಸುಲಿಗೆಗೆ ಸಂಬಂಧಿಸಿದ ಬೆದರಿಕೆಗಳ ಬಗ್ಗೆ ದೂರುತ್ತಿರುವ ವೇಳೆಯೇ ಈ ಘಟನೆ ಸಂಭವಿಸಿದೆ.
ಘಟನೆ ಖಂಡಿಸಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಘಟನೆ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು. ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಕಾಲೇಜಿನ ವಿದ್ಯಾರ್ಥಿ ಥಾಕ್ಚೊಮ್ ಯೈಫಾಬಿ ಚಾನು ಆಗ್ರಹಿಸಿದರು. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.