ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಆರ್ಟಿಲರಿ ಸೆಂಟರ್‌ನಲ್ಲಿ ಶೂಟಿಂಗ್ ಅಭ್ಯಾಸದ ವೇಳೆ ಭಾರತೀಯ ಫೀಲ್ಡ್ ಗನ್‌ನಿಂದ ಶೆಲ್ ಸ್ಫೋಟಗೊಂಡ ಪರಿಣಾಮ ಇಬ್ಬರು ಅಗ್ನಿವೀರರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಆರ್ಟಿಲರಿ ಸೆಂಟರ್‌ನಲ್ಲಿ ಶೂಟಿಂಗ್ ಅಭ್ಯಾಸದ ವೇಳೆ ಭಾರತೀಯ ಫೀಲ್ಡ್ ಗನ್‌ನಿಂದ ಶೆಲ್ ಸ್ಫೋಟಗೊಂಡ ಪರಿಣಾಮ ಇಬ್ಬರು ಅಗ್ನಿವೀರರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ನಾಸಿಕ್ ರೋಡ್ ಪ್ರದೇಶದ ಆರ್ಟಿಲರಿ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಫೋಟದಲ್ಲಿ ಅಗ್ನಿವೀರರಾದ ಗೋಹಿಲ್ ವಿಶ್ವರಾಜ್ ಸಿಂಗ್ (20) ಮತ್ತು ಸೈಫತ್ ಶಿಟ್ (21) ಮೃತಪಟ್ಟಿದ್ದಾರೆ.
ಅಗ್ನಿವೀರರ ತಂಡವೊಂದು ಭಾರತೀಯ ಫೀಲ್ಡ್ ಗನ್ ಅನ್ನು ಶೆಲ್‌ಗಳಿಂದ ಸಿಡಿಸುತ್ತಿದ್ದಾಗ ಅವುಗಳಲ್ಲಿ ಒಂದು ಸ್ಫೋಟಗೊಂಡಿದೆ. ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನೂ ದೇವಲಾಲಿಯ ಎಂ.ಎಚ್. ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹವಿಲ್ದಾರ್ ಅಜಿತ್ ಕುಮಾರ್ ಅವರ ದೂರಿನ ಮೇರೆಗೆ, ದೇವಲಾಲಿ ಕ್ಯಾಂಪ್ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.