ತಿರುವನಂತಪುರಂ: ತಿರುವಾಂಕೂರು ದೇವಸ್ವಂ ಮಂಡಳಿಯು ಜಗತ್ತಿನಾದ್ಯಂತ ಇರುವ ಅಯ್ಯಪ್ಪ ಭಕ್ತರಿಗಾಗಿ ರೇಡಿಯೋ ಪ್ರಸಾರ ಆರಂಭಿಸಿದೆ.
ಪ್ರಸಾರವು ಸಂಪೂರ್ಣವಾಗಿ ಮಂಡಳಿಯ ನಿಯಂತ್ರಣದಲ್ಲಿರುತ್ತದೆ. ಇಂಟರ್ನೆಟ್ ರೇಡಿಯೊವನ್ನು ಹರಿವರಾಸನಂ ಎಂದು ಕರೆಯಲಾಗುವುದು.
24 ಗಂಟೆಗಳ ರೇಡಿಯೋ ಪ್ರಸಾರ ಇರುತ್ತದೆ. ಹರಿವರಾಸನಂ ರೇಡಿಯೋ ಶಬರಿಮಲೆ ಸಂಬಂಧಿತ ಪ್ರಕಟಣೆಗಳು, ವಿಶೇಷ ವಿಭಾಗಗಳು ಮತ್ತು ರೇಡಿಯೊ ಹೋಸ್ಟ್‍ಗಳೊಂದಿಗೆ ಸಂವಹನ ನಡೆಸುವ ಅವಕಾಶವನ್ನು ಸಹ ಒಳಗೊಂಡಿರುತ್ತದೆ.
ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಇದ್ದು ಆಲಿಸಬಹುದಾಗಿದೆ. ಭವಿಷ್ಯದಲ್ಲಿ ಸಮುದಾಯ ರೇಡಿಯೊ ಆಗಿ ಪರಿವರ್ತನೆಯಾಗುವ ಸಾಧ್ಯತೆಯೂ ಇದೆ. ಸಿದ್ಧರಿರುವ ಕಂಪನಿಗಳಿಂದ ಟೆಂಡರ್ ಗಳನ್ನು ಶೀಘ್ರದಲ್ಲೇ ಆಹ್ವಾನಿಸಲಾಗುತ್ತದೆ. ರೇಡಿಯೋ ಕ್ಷೇತ್ರದಲ್ಲಿ 15 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ.