ಉಪ್ಪಳ: ಉಪ್ಪಳ ನಯಾಬಜಾರ್ ಸನಿಹದ ಪಾರೆಕಟ್ಟೆ ಎಂಬಲ್ಲಿ ಚಿರತೆ ಸಂಚಾರದ ಬಗ್ಗೆ ವದಂತಿ ಹರಡಿದ್ದು, ನಾಗರಿಕರಲ್ಲಿ ಆತಂಕ ಎದುರಾಗಿದೆ. ಗುರುವರ ತಡರಾತ್ರಿ ಚಿರತೆಯನ್ನು ಹೋಲುವ ದೊಡ್ಡ ಪ್ರಾಣಿಯೊಂದನ್ನು ಕಂಡಿರುವುದಾಗಿ ವ್ಯಕ್ತಿಯೊಬ್ಬರು ನೀಡಿದ ಮಾಹಿತಿಯನ್ವಯ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಹುಡುಕಾಟ ನಡೆಸಿದರೂ ಚಿರತೆ ಕಂಡುಬಂದಿರಲಿಲ್ಲ. ಚಿರತೆ ಸಂಚಾರದ ಬಗ್ಗೆ ಯಾವುದೇ ಕುರುಹೂ ಪತ್ತೆಯಾಗಿಲ್ಲ. ಹುಡುಕಾಟ ಮುಂದುವರಿಸಲಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.