ಕುಂಬಳೆ : ಕುಂಬಳೆ ಪೆರುವಾಡ್ ಸಮುದ್ರದಲ್ಲಿ ಬಲೆಯೊಂದಿಗೆ ಮೀನು ಹಿಡಿಯಲು ತೆರಳಿದ್ದ ಸಂದರ್ಭ ನೀರಿನಲ್ಲಿ ನಾಪತ್ತೆಯಾಗಿದ್ದ ಪೆರುವಾಡ್ ಕಡಪ್ಪುರ ಫಿಶರೀಸ್ ಕಾಲನಿ ನಿವಾಸಿ, ಫಾತಿಮಾ ಎಂಬವರ ಪುತ್ರ ಆರ್ಷದ್(19)ಮೃತದೇಹ ಕುಂಬಳೆ ಅಳಿವೆಯಲ್ಲಿ ಪತ್ತೆಯಾಗಿದೆ.
ಮಂಗಳವಾರ ಸಂಜೆ ಬಲೆಯೊಂದಿಗೆ ಮೀನುಹಿಡಿಯಲು ತೆರಳಿದ್ದ ಆರ್ಷದ್ ಬೃಹತ್ ಅಲೆಗೆ ಸಿಲುಕಿ ನಾಪತ್ತೆಯಾಗಿದ್ದು, ಅಗ್ನಿಶಾಮಕದಳ, ಕರಾವಳಿ ಪೊಲೀಸ್, ಸ್ಥಳೀಯ ಪೊಲೀಸರು ಹಾಗೂ ಸಾರ್ವಜನಿಕರು ಹುಡುಕಾಟ ನಡೆಸುತ್ತಿರುವ ಮಧ್ಯೆ, ಮೀನುಗಾರರು ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.