ಕಾಸರಗೋಡು: ಶಾಲೆಯ ವಾಶ್ ರೂಂನಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿರುವ ದೂರಿನ ಮೇರೆಗೆ ಪ್ಲಸ್ ಟು ವಿದ್ಯಾರ್ಥಿಗಳ ವಿರುದ್ಧ ಕಾಸರಗೋಡು ನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊಗ್ರಾಲ್ ಪುತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಕ್ಟೋಬರ್ 9 ರಂದು ಮಧ್ಯಾಹ್ನ 3.30 ರಿಂದ 4.30 ರ ನಡುವೆ ಘಟನೆ ನಡೆದಿದೆ.
ಶಾಲೆಯ ಕೆಲ ವಿದ್ಯಾರ್ಥಿಗಳು ಶಾಲಾ ಕಟ್ಟಡದಲ್ಲಿ ಪ್ಲಸ್ ಟು ತರಗತಿಯ ಬಾಲಕರು ಬಳಸುತ್ತಿದ್ದ ಶೌಚಾಲಯದ ಬಚ್ಚಲು, ವಾಶ್ ಬೇಸಿನ್, ಪೈಪ್ ಟೇಪ್, ಸ್ವಿಚ್ ಬೋರ್ಡ್ ಧ್ವಂಸಗೊಳಿಸಿದ್ದು, ಈ ಘಟನೆಯಲ್ಲಿ ಸುಮಾರು 10 ಸಾವಿರ ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶಾಲಾ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಗುರುತಿಸಲಾದ ವಿದ್ಯಾರ್ಥಿಗಳ ವಿರುದ್ಧ ಸಾರ್ವಜನಿಕ ಆಸ್ತಿ ನಾಶ ತಡೆ ಕಾಯ್ದೆಯ ಸೆಕ್ಷನ್ 3 (1) ಅಡಿಯಲ್ಲಿ ಪ್ರಕರಣ ದಾಖಲಿಸಿ, ಪೋಲೀಸರು ತನಿಖೆ ನಡೆಸುತ್ತಿದ್ದಾರೆ.