HEALTH TIPS

ವಿಶೇಷ ಶಾಲಾ ಕಲೋತ್ಸವ: ಅಜೀಶ್ ಗೆ ಒಲಿದ ಪ್ರಥಮ ಎ ಗ್ರೇಡ್

ಕಣ್ಣೂರು: ಕಣ್ಣೂರಿನಲ್ಲಿ ನಿನ್ನೆ ಆರಂಭವಾದ ರಾಜ್ಯ ವಿಶೇಷ ಶಾಲಾ ಕಲೋತ್ಸವದ ಮೋಹಿನಿಯಟ್ಟಾ ವೇದಿಕೆಯಲ್ಲಿ ಓಮನತಿಂಗಳ್ ಕಿತಾವೋ... ಎಂಬ ಸಾಲುಗಳೊಂದಿಗೆ ಎಸ್.ಎಲ್ ಅಜೀಶ್ ಅದ್ಭುತ ನಟನೆ ಪ್ರದರ್ಶಿಸಿ ಗಮನ ಸೆಳೆದರು.

ಅಜೀಶ್ ಗೆ ಪ್ರಥಮ ಎ ಗ್ರೇಡ್ ಲಭಿಸಿದೆ. ಇವರು ತಿರುವನಂತಪುರಂನ ಅಮರ ವಾಲಾ ಕಾರುಣ್ಯ ವಿಶೇಷ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿ. ಮೋಹಿನಿಯಾಟ್ಟಂ ಪ್ರಥಮ ಎ ಗ್ರೇಡ್ ಪಡೆದಿರುವುದು ಸತತ ಎರಡನೇ ವರ್ಷ.

ಎರಡನೆ ವರ್ಷ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಾಗ ಪಾಲಕರು ಕಾರ್ಯಕ್ರಮ ವೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಅಜೀಶ್ ಬೇಸರ ಹಂಚಿಕೊಂಡರು. ಅಜೀಶನ ತಾಯಿ ಲಾಲಿ ಮತ್ತು ತಂದೆ ಸುನಿಲ್ ಕುಮಾರ್ ಕೂಲಿ ಕಾರ್ಮಿಕರು. ಜೀವನ ನಿರ್ವಹಣೆಗೆ ಹೆಣಗಾಡುತ್ತಿರುವಾಗ, ಪುತ್ರನ ಪ್ರದರ್ಶನವನ್ನು ವೀಕ್ಷಿಸಲು ಅವರಿಗೆ ಸಾಧ್ಯವಾಗಲಿಲ್ಲ. ಶಾಲೆಯ ಶಿಕ್ಷಕರಾದ ಅಲ್ಬಿ ಜಿಜಿನ್, ಅಮೃತಾ, ಮನೋಜ್ ಮತ್ತು ಗೌರಿ ಅವರು ಅಜೀಶ್ ಅವರೊಂದಿಗೆ ಕಣ್ಣೂರಿಗೆ ಆಗಮಿಸಿದ್ದರು. 

ಮೊದಲ ದಿನವಾದ ನಿನ್ನೆ ಮಾನಸಿಕ ಅಸ್ವಸ್ಥ ಮಕ್ಕಳಿಗಾಗಿ ಸ್ಪರ್ಧೆ ಏರ್ಪಡಿಸಲಾಗಿತ್ತು. ದೃಷ್ಟಿ ಮತ್ತು ಶ್ರವಣದೋಷವುಳ್ಳ ಮಕ್ಕಳಿಗಾಗಿ ಇಂದು ಮತ್ತು ನಾಳೆ ಸ್ಪರ್ಧೆಗಳು ನಡೆಯಲಿವೆ. ಅಜೀಶ್ ಮೋಹಿನಿಯಾಟ್ಟಂ ಅಲ್ಲದೆ ಸಂಘಗಾನಂನಲ್ಲಿಯೂ ಎ ಗ್ರೇಡ್ ಪಡೆದಿದ್ದಾರೆ. ಜಾನಪದ ನೃತ್ಯ ಮತ್ತು ದೇಶಭಕ್ತಿ ಗೀತೆಗಳ ಸ್ಪರ್ಧೆಯೂ ಇದೆ.

ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ 1600 ವಿದ್ಯಾರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಕಣ್ಣೂರು ಮುನ್ಸಿಪಲ್ ಶಾಲೆಯ ಮುಖ್ಯ ವೇದಿಕೆಯಲ್ಲಿ ಶಾಸಕ ಕೆ.ವಿ. ಸುಮೇಶ್  ಉದ್ಘಾಟಿಸಿದರು. ನಾಳೆ ಕಲೋತ್ಸವ ಕೊನೆಗೊಳ್ಳಲಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries