ಗಾಜಾ: ಹಮಾಸ್ ಸರ್ಕಾರದ ಮುಖ್ಯಸ್ಥ ರಾವ್ಹಿ ಮುಷ್ತಾಹ ಸೇರಿದಂತೆ ಹಲವು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಭದ್ರತಾ ಪಡೆ (ಐಡಿಎಫ್) ಹಾಗೂ ಇಸ್ರೇಲ್ ರಕ್ಷಣಾ ಪ್ರಾಧಿಕಾರ (ಐಎಸ್‌ಎ) ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.
ಗಾಜಾ: ಹಮಾಸ್ ಸರ್ಕಾರದ ಮುಖ್ಯಸ್ಥ ರಾವ್ಹಿ ಮುಷ್ತಾಹ ಸೇರಿದಂತೆ ಹಲವು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಭದ್ರತಾ ಪಡೆ (ಐಡಿಎಫ್) ಹಾಗೂ ಇಸ್ರೇಲ್ ರಕ್ಷಣಾ ಪ್ರಾಧಿಕಾರ (ಐಎಸ್‌ಎ) ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.
'ಮೂರು ತಿಂಗಳ ಹಿಂದೆ ಗಾಜಾ ಪಟ್ಟಿ ಮೇಲೆ ಜಂಟಿಯಾಗಿ ನಡೆಸಿದ ದಾಳಿ ವೇಳೆ ಈ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದೇವೆ ಎಂದು ಐಡಿಎಫ್ ಹಾಗೂ ಐಎಸ್‌ಎ ಈಗ ಘೋಷಿಸುತ್ತಿವೆ.
'ಉತ್ತರ ಗಾಜಾದಲ್ಲಿ ನೆಲದಡಿಯಲ್ಲಿನ ಸುಸಜ್ಜಿತ ತಾಣದಲ್ಲಿ ಉಗ್ರರು ಅಡಗಿರುವ ಬಗ್ಗೆ ಐಡಿಎಫ್ ಹಾಗೂ ಐಎಸ್‌ಎ ಗುಪ್ತಚರ ದಳ ನೀಡಿದ ಖಚಿತ ಮಾಹಿತಿ ಆಧರಿಸಿ ಇಸ್ರೇಲ್ ವಾಯು ಪಡೆಯು ನಿಖರ ದಾಳಿ ನಡೆಸಿತ್ತು' ಎಂದು ಉಲ್ಲೇಖಿಸಿದೆ.
'ಆ ರಹಸ್ಯ ತಾಣವು ಹಮಾಸ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವಾಗಿತ್ತು. ಅದನ್ನು ಹಮಾಸ್‌ನ ಭದ್ರತಾ ವ್ಯವಸ್ಥೆಯ ಉನ್ನತ ಸದಸ್ಯರು ನಿರ್ವಹಿಸುತ್ತಿದ್ದರು. ಅದು, ಮುಷ್ತಾಹ ನೇತೃತ್ವದ ಹಮಾಸ್‌ನ ಪ್ರಮುಖರ ಅಡಗುತಾಣವೂ ಆಗಿತ್ತು' ಎಂದು ಹೇಳಲಾಗಿದೆ.
'ದಾಳಿಯ ನಂತರ ಬಂಡುಕೋರರ ನೈತಿಕ ಸ್ಥೈರ್ಯ ಕುಸಿಯುವುದನ್ನು ತಪ್ಪಿಸಲು ಹಾಗೂ ಕಾರ್ಯಾಚರಣೆ ಮೇಲೆ ಪರಿಣಾಮ ಉಂಟಾಗುವುದನ್ನು ತಡೆಯುವುದಕ್ಕಾಗಿ ತನಗಾದ ನಷ್ಟವನ್ನು ಹಮಾಸ್ ಹೇಳಿಕೊಂಡಿಲ್ಲ' ಎಂದು ಐಡಿಎಫ್ ಪ್ರತಿಪಾದಿಸಿದೆ.