ಕಾಸರಗೋಡು: ಚೆಮ್ನಾಡು ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನ.1 ಮತ್ತು 2ರಂದು ನಡೆಯಲಿರುವ ಕಂದಾಯ ಜಿಲ್ಲಾ ಶಾಲಾ ವಿಜ್ಞಾನ ಮೇಳದ ಲಾಂಛನ ಬಿಡುಗಡೆ ಸಮರಂಭ ಶಾಲೆಯಲ್ಲಿ ನಡೆಯಿತು.
ಲಾಂಛನವನ್ನು ಡಾ.ಎಂ.ಪಿ.ಶಾಫಿ ಹಾಜಿ ಬಿಡುಗಡೆಗೊಳಿಸಿದರು. ಶರತ್ ಇಟ್ಟಂ ಲಾಂಛನವನ್ನು ವಿನ್ಯಾಸಗೊಳಿಸಿದ್ದಾರೆ. ಶಾಲಾ ವ್ಯವಸ್ಥಾಪಕ, ಮಾಜಿ ಸಚಿವ ಸಿ.ಟಿ.ಅಹ್ಮದಲಿ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಸಂಚಾಲಕ ಡಾ.ಎ.ಸುಕುಮಾರನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಕೆ.ವಿಜಯನ್, ಶಾಲಾ ರಕ್ಷಕ ಶೀಕ್ಷಕ ಸಂಘದ ಅಧ್ಯಕ್ಷ ಪಿ.ಎಂ.ಅಬ್ದುಲ್ಲಾ, ಜಮಾ ಅತ್ ಸಮಿತಿ ಉಪಾಧ್ಯಕ್ಷ ಶಹಜಹಾನ್ ಆಲಿಚೇರಿ, ಶಾಲಾ ಸಂಚಾಲಕ ಸಿ.ಎಚ್.ರಫೀಕ್, ಕಾರ್ಯದರ್ಶಿ ಸಿ.ಎಚ್.ಶಾಜು, ಪಿ.ಟಿ.ಎ ಉಪಾಧ್ಯಕ್ಷ ಅನ್ವರ್ ಚೆಮ್ನಾಡ್, ಪ್ರಚಾರ ಸಮಿತಿ ಸಂಚಾಲಕ ಇಬ್ರಾಹಿಂ ಕರೀಂ, ವಿ.ಪಿ.ಯೂಸುಫ್, ಕಾಸರಗೋಡು ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ನಾರಾಯಣನ್ ಉಪಸ್ಥಿತರಿದ್ದರು.