ಕಾಸರಗೋಡು: ನಗರದ ಮೀಪುಗುರಿ ಪಾರೆಕಟ್ಟೆ ಮಡಪ್ಪುರ ಶ್ರೀ ಮುತ್ತಪ್ಪನ್ ಕ್ಷೇತ್ರದಲ್ಲಿ ನವಾನ್ನ ಮತ್ತು ಶ್ರೀ ಮುತ್ತಪ್ಪನ್ ವೆಳ್ಳಾಟ ಮಹೋತ್ಸವ ಸಂಪನ್ನಗೊಂಡಿತು. ಶ್ರೀ ಮುತ್ತಪ್ಪನ್ ದೈವದ ನವಾನ್ನ ಪೈಂಗುತ್ತಿ ದರ್ಶನ, ಶ್ರೀ ಮುತ್ತಪ್ಪನ್ ದೈವದ ಮಲೆ ಇಳಿಸುವಿಕೆ, ಶ್ರೀ ಮುತ್ತಪ್ಪನ್ ದೈವದ ಊಟ್ ವೆಳ್ಳಾಟ (ಕೋಲ)ನಡೆಯಿತು. ನಂತರ ನವಾನ್ನ ಪ್ರಸಾದ ವಿತರಣೆ, ಶ್ರೀ ಮುತ್ತಪ್ಪನ್ ದೈವವನ್ನು ಮಲೆ ಏರಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.