ಕಾಸರಗೋಡು: ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಕಾಸರಗೋಡಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾಳೆ. ಉದುಮ ಕೋಕಾಲ್ ನಿವಾಸಿ ರಿಜೇಶ್-ಸಿತಾರಾ ದಂಪತಿ ಪುತ್ರಿ ಸಾತ್ವಿಕಾ(9)ಮೃತಪಟ್ಟ ಬಾಲಕಿ. ಈಕೆಗೆ ಮೂರು ದಿವಸಗಳ ಹಿಂದೆ ಜ್ವರ ಬಾಧಿಸಿದ್ದು, ಔಷಧ ಸ್ವೀಕರಿಸುತ್ತಿದ್ದಂತೆ ಗುಣಮುಖಳಾಗಿದ್ದು, ಸೋಮವಾರ ಮತ್ತೆ ಜ್ವರ ಉಲ್ಬಣಗೊಂಡಿತ್ತು. ತಕ್ಷಣ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದರೂ, ತಡರಾತ್ರಿ ಮೃತಪಟ್ಟಿದ್ದಾಳೆ. ಪಠ್ಯದೊಂದಿಗೆ ನೃತ್ಯ, ಚಿತ್ರ ರಚನೆಯಲ್ಲೂ ಸಾತ್ವಿಕಾ ಮುಂಚೂಣಿಯಲ್ಲಿದ್ದಳು. ಉದುಮ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ನಾಲ್ಕನೇ ತರಗತಿ ವಇದ್ಯಾರ್ಥಿನಿಯಾಗಿದ್ದಳು. ಬಾಲಕಿ ಮೃತದೇಹ ಶಾಲೆಯಲ್ಲಿ ಅಂತಿಮದರ್ಶನಕ್ಕಿರಿಸಿದ ಬಳಿಕ ಅಂತ್ಯಸಂಸ್ಕಾರ ನಡೆಸಲಾಯಿತು.