ಭುಜ್: ಭಾರತ ತನ್ನ ಗಡಿ ಪ್ರದೇಶಗಳಲ್ಲಿ ಒಂದು ಇಂಚು ಭೂಮಿಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ತಿಳಿಸಿದ್ದಾರೆ.
ಗುಜರಾತ್‌ನ ಕಚ್ ಜಿಲ್ಲೆಯ ಭಾರತ-ಪಾಕ್ ಗಡಿಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧರೊಂದಿಗೆ ಇಂದು (ಗುರುವಾರ) ದೀಪಾವಳಿ ಹಬ್ಬವನ್ನು ಆಚರಿಸಿ, ಬಳಿಕ ಮಾತನಾಡಿ ಅವರು, ದೇಶವನ್ನು ರಕ್ಷಿಸುವ ಮಿಲಿಟರಿ ಶಕ್ತಿಯ ಮೇಲೆ ಜನರಿಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.
'ಭಾರತ ಗಡಿ ಪ್ರದೇಶಗಳಲ್ಲಿ ಒಂದು ಇಂಚು ಭೂಮಿಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಯಾವುದೇ ರಾಜಿಯಿಲ್ಲ. ನಾವು ನಮ್ಮ ಸೈನಿಕರ ಬದ್ಧತೆಯ ಬಗ್ಗೆ ವಿಶ್ವಾಸವಿದೆ ಹೊರತು ಶತ್ರುಗಳ ಮೇಲಲ್ಲ' ಎಂದು ತಿಳಿಸಿದ್ದಾರೆ.
ದೇಶದ ಜನ ನಿಮ್ಮತ್ತ (ಯೋಧರು) ನೋಡಿದಾಗ ಸುರಕ್ಷಿತ ಭಾವನೆಯಿಂದ ಇರುತ್ತಾರೆ. ಅದೇ ಶತ್ರುಗಳು ನಿಮ್ಮತ್ತ ನೋಡಿದರೆ ಅವರ ಅಂತ್ಯ ನೋಡುತ್ತಾರೆ ಎಂದು ಯೋಧರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.