ತಿರುವನಂತಪುರಂ: ಮೂರೂವರೆ ವರ್ಷದ ಬಾಲಕನನ್ನು ಅಮಾನುಷವಾಗಿ ಥಳಿಸಿರುವ ಮಟ್ಟಂಚೇರಿ ಸ್ಮಾರ್ಟ್ ಕಿಡ್ಸ್ ಪ್ಲೇ ಸ್ಕೂಲ್ ನ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಸಚಿವರು ಶಿಕ್ಷಣ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಇದು ಮಾನ್ಯತೆ ಇಲ್ಲದ ಪ್ಲೇ ಸ್ಕೂಲ್. ಶಿಕ್ಷಣ ಹಕ್ಕು ಕಾಯಿದೆ ಮತ್ತು ಕೇರಳ ಶಿಕ್ಷಣ ಕಾಯ್ದೆ ಪ್ರಕಾರ ಶಾಲಾ ಅಧಿಕಾರಿಗಳ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಮಗುವಿಗೆ ಥಳಿಸಿದ ಘಟನೆಯಲ್ಲಿ ಶಿಕ್ಷಕಿ ಸೀತಾಲಕ್ಷ್ಮಿಯನ್ನು ಪೋಲೀಸರು ಬಂಧಿಸಿದ್ದರು.
ಇದೇ ವೇಳೆ ಕಾನೂನು ಪಾಲನೆ, ಏಕರೂಪತೆ ಇಲ್ಲದೇ ನಡೆಯುತ್ತಿರುವ ಬಾಲಮಂದಿರ, ನರ್ಸರಿ ಶಾಲೆಗಳ ಹಾವಳಿ ನಿಯಂತ್ರಣಕ್ಕೆ ಮಸೂದೆ ಮಂಡಿಸಬೇಕೆಂದು ಶಾಸಕ ಪಿ.ಸಿ.ವಿಷ್ಣುನಾಥ್ ವಿಧಾನಸಭೆಯಲ್ಲಿ ಒತ್ತಾಯಿಸಿದರು. ಕಾರ್ ಶೆಡ್ ನಲ್ಲೂ ಬಾಲಮಂದಿರ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕರು ತಿಳಿಸಿದರು.