ಪಶ್ಯಂಗಡಿ: ಪಿಪಿ ದಿವ್ಯಾ ಸಿಪಿಎಂ ಅಪರಾಧದ ಸರಣಿಯ ವಿಶಿಷ್ಟ ಉತ್ಪನ್ನ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ ಹೇಳಿದ್ದಾರೆ.
ಕಣ್ಣೂರು ಎಡಿಎಂ ನವೀನ್‍ಬಾಬು ಆತ್ಮಹತ್ಯೆಗೆ ಶರಣಾದ ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಪಿ.ದಿವ್ಯಾ ಅವರ ಮನೆಗೆ ಬಿಜೆಪಿ ಕಲ್ಲ್ಯಶ್ಶೇರಿ ಕ್ಷೇತ್ರ ಸಮಿತಿ ವತಿಯಿಂದ ಇರಿನಾವದಿಂದÀ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಕರೆದಿದ್ದ ಎಡಿಎಂ ನವೀನ್ ಬಾಬು ಅವರ ಅಧಿಕೃತ ಬೀಳ್ಕೊಡುಗೆ ಸಮಾರಂಭಕ್ಕೆ ನುಗ್ಗಿದ ದಿವ್ಯಾ ಅವರನ್ನು ಬಂಧಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಅಬ್ದುಲ್ಲಕುಟ್ಟಿ ಮಾತನಾಡಿ, ದಿವ್ಯಾಳನ್ನು ಘಟನೆಯಿಂದ ಪಾರುಗೊಳಿಸಬಹುದೆಂಬುದು ಜಯರಾಜನ್ ಅÀವರ ಹಗಲುಗನಸಾಗಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ದಿವ್ಯಾ ಸಮಾಜಘಾತುಕ ಕೃತ್ಯವೆಸಗಿದ್ದು, ಅವರನ್ನು ಮಟ್ಟ ಹಾಕುವವರೆಗೂ ಬಿಜೆಪಿ ಪ್ರಬಲ ಆಂದೋಲನ ಕಾರ್ಯಕ್ರಮಗಳೊಂದಿಗೆ ರಂಗಕ್ಕಿಳಿಯಲಿದೆ ಎಂದರು.
ಪಿ.ಪಿ. ದಿವ್ಯಾ ಮತ್ತು ಆಕೆಯ ಪತಿಯ ಬೇನಾಮಿ ವಹಿವಾಟಿನ ಬಗ್ಗೆಯೂ ತೀವ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್. ಹರಿದಾಸ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಸಿ. ರಘುನಾಥ್, ರಾಜ್ಯ ಕಾರ್ಯದರ್ಶಿ ಕೆ. ರಂಜಿತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಂ.ಆರ್. ಸುರೇಶ, ಬಿಜು ಎಲಕುಜಿ, ರಮೇಶ ಚೆಂಗುಣಿ ಮತ್ತಿತರರು ಮಾತನಾಡಿದರು. ಕನ್ನಪುರಂ ಇರಿನಾವ್ ರಸ್ತೆಯಲ್ಲಿ ಮೆರವಣಿಗೆಯನ್ನು ಪೋಲೀಸರು ತಡೆದರು.
ಬಿಜೆಪಿ ಹಾಗೂ ಯುವ ಕಾಂಗ್ರೆಸ್ ಮನೆಗಳಿಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದರಿಂದ ಸಿಪಿಎಂ ಕಾರ್ಯಕರ್ತರು ಬೆಳಗ್ಗೆಯಿಂದಲೇ ದಿವ್ಯಾ ಮನೆಗೆ ರಕ್ಷಣೆಗೆ ಬಂದಿದ್ದರು.