ಚೆನ್ನೈ: ಹಣದ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ತಮಿಳುನಾಡು ಮಾಜಿ ಸಚಿವ ವೈದ್ಯಲಿಂಗಮ್ ಹಾಗೂ ಇತರರಿಗೆ ಸೇರಿದ ಸ್ಥಳಗಳ ಮೇಲೆ ಬುಧವಾರ ದಾಳಿ ಮಾಡಿದೆ.
ಚೆನ್ನೈ: ಹಣದ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ತಮಿಳುನಾಡು ಮಾಜಿ ಸಚಿವ ವೈದ್ಯಲಿಂಗಮ್ ಹಾಗೂ ಇತರರಿಗೆ ಸೇರಿದ ಸ್ಥಳಗಳ ಮೇಲೆ ಬುಧವಾರ ದಾಳಿ ಮಾಡಿದೆ.
ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಚೆನ್ನೈ ಸೇರಿದಂತೆ ರಾಜ್ಯದ ನಾಲ್ಕು ನಗರಗಳಲ್ಲಿ ಶೋಧ ನಡೆಯುತ್ತಿದೆ.
ವಸತಿ ಸಚಿವರಾಗಿದ್ದ ಅವಧಿಯಲ್ಲಿ ಚೆನ್ನೈ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಹಲವು ಕಾಮಗಾರಿಗಳಿಗೆ ಮಂಜೂರಾತಿ ನೀಡಲು ಲಂಚ ಪಡೆದ ಆರೋಪ ವೈದ್ಯಲಿಂಗಮ್ ಅವರ ಮೇಲಿದೆ. ಈ ಸಂಬಂಧ ಇ.ಡಿ. ತನಿಖೆ ನಡೆಸುತ್ತಿದೆ.
ವೈದ್ಯಲಿಂಗಮ್ ಅವರು ಮಾಜಿ ಮುಖ್ಯಮಂತ್ರಿ ಒ.ಪನ್ನೀರಸೆಲ್ವಂ (ಒಪಿಎಸ್) ಅವರ ಆಪ್ತರಾಗಿದ್ದರು. ಎಐಎಡಿಎಂಕೆ ನಾಯಕತ್ವದ ವಿಚಾರವಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾದ ಬಳಿಕ ಪನ್ನೀರಸೆಲ್ವಂ, ವೈದ್ಯಲಿಂಗಮ್ ಹಾಗೂ ಇನ್ನಿತರರನ್ನು 2022ರಲ್ಲಿ ಪಕ್ಷದಿಂದ ಹೊರಹಾಕಲಾಯಿತು.