ಬದಿಯಡ್ಕ: ಕೇರಳ ಪೆನ್ಶನರ್ಸ್ ಸಂಘದ ಕುಂಬ್ಡಾಜೆ ಪಂಚಾಯತಿ ಸಮಿತಿಯ ಮಹಾಸಭೆ ಗುರುವಾರ ಮವ್ವಾರು ಷಡಾನನ ಲೈಬ್ರರಿ ಕಟ್ಟಡದಲ್ಲಿ ನಡೆಯಿತು. ಸೂರ್ಯ ನಾರಾಯಣ ಭಟ್ ಮಾಳಿಗೆ ಮನೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಈಶ್ವರ ರಾವ್ ಹಾಗೂ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ನಾಗರಾಜ ಬಾಳಿಕೆ, ರಾಜ್ಯ ಸಮಿತಿ ಸದಸ್ಯ ಸೀತಾರಾಮ ರಾವ್ ಭಾಗವಹಿಸಿ ಮಾತನಾಡಿದರು.