ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಚೌಖಂಬದಲ್ಲಿ ಚಾರಣದ ವೇಳೆ ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಮಹಿಳಾ ಪರ್ವತಾರೋಹಿಗಳನ್ನು ಇಂದು (ಭಾನುವಾರ) ಬೆಳಿಗ್ಗೆ ರಕ್ಷಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
ಅಕ್ಟೋಬರ್ 3ರಂದು 'ಚೌಖಂಬ III' ಶಿಖರಕ್ಕೆ ಹೋಗುವ ಮಾರ್ಗದಲ್ಲಿ 6,015 ಮೀಟರ್ ಎತ್ತರದಲ್ಲಿ ವಿದೇಶಿ ಪರ್ವತಾರೋಹಿಗಳು ಅಪಾಯಕ್ಕೆ ಸಿಲುಕಿದ್ದರು.
ಅಮೆರಿಕದ ಮಿಚೆಲ್ ಥೆರೆಸಾ ಡ್ವೊರಾಕ್ ಮತ್ತು ಬ್ರಿಟನ್‌ನ ಫಾವ್ ಜೇನ್ ಮ್ಯಾನರ್ಸ್ ಅವರ ರಕ್ಷಣೆಗಾಗಿ ಭಾರತೀಯ ವಾಯುಪಡೆ (ಐಎಎಫ್) ಎರಡು ಹೆಲಿಕಾಪ್ಟರ್‌ಗಳ ಮೂಲಕ ಕಾರ್ಯಾಚರಣೆಯನ್ನು ನಡೆಸಿತ್ತು.
ಇಂಡಿಯಾ ಮೌಂಟೆನಿಯರಿಗ್ ಫೌಂಡೇಶನ್‌ನ (ಐಎಂಎಫ್) ವಿದೇಶಿ ಪರ್ವತಾರೋಹಣದ ಭಾಗವಾಗಿ ಚಾರಣಕ್ಕೆ ತೆರಳಿದ್ದರು.
ಪರ್ವತಾರೋಹಿಗಳ ರಕ್ಷಣೆಗೆ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತರಬೇತಿ ಪಡೆದ ಇಬ್ಬರು ನುರಿತ ಚಾರಣಿಗರು ಸಾಥ್ ನೀಡಿದ್ದರು.