ಬದಿಯಡ್ಕ: ನವರಾತ್ರಿ ಮಹೋತ್ಸವದ ಅಂಗವಾಗಿ ಕುಂಟಿಕಾನ ಮಠ ಶ್ರೀ ಶಂಕರಣರಾಯಣ ದೇವಸ್ಥಾನದಲ್ಲಿ ಲಲಿತಾ ಪಂಚಮಿಯ ಅಂಗವಾಗಿ ವಿಶೇಷ ದುರ್ಗಾ ಪೂಜೆ ಬ್ರಹ್ಮ ಶ್ರೀ ಪಾಂಡೇಲು ಶಿವಶಂಕರ ಭಟ್ ಇವರ ದಿವ್ಯ ಹಸ್ತದಿಂದ ನೆರವೇರಿತು. ಸಂಜೆ 7 ರಿಂದ ಸ್ಥಳೀಯ ಮಹಿಳೆಯರಿಂದ ಲಲಿತಾ ಸಹಸ್ರನಾಮ ಪಾರಾಯಣ, 8 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನದಾನ ದೊಂದಿಗೆ ಕಾರ್ಯ ಕ್ರಮ ಸಂಪನ್ನಗೊಂಡಿತು.