ಬದಿಯಡ್ಕ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾಸರಗೋಡು ಜಿಲ್ಲಾ ಮಟ್ಟದ ಮಕ್ಕಳ ಕುರಿತು ನಮ್ಮ ಜವಾಬ್ದಾರಿ ಯೋಜನೆಯ ಆಶ್ರಯದಲ್ಲಿ ಗುರುವಾರ ಮವ್ವಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೀವನ ಕೌಶಲ್ಯ ಅಭಿವೃದ್ಧಿ ಶಿಬಿರ ಜರಗಿತು.
ಓ.ಆರ್.ಸಿ ತರಬೇತುದಾರ ನಿರ್ಮಲ್ ಕುಮಾರ್ ತರಗತಿ ನಡೆಸಿಕೊಟ್ಟರು. ಜಿಲ್ಲಾ ಸಂಯೋಜಕಿ ರಮ್ಯಶ್ರೀ ಹಾಗೂ ಕೌನ್ಸಿಲರ್ ಅಮೃತ ಶಿಬಿರದ ನೇತೃತ್ವ ವಹಿಸಿದ್ದರು. ಆಸಕ್ತಿದಾಯಕ ಆಟಗಳ ಮೂಲಕ ಮಕ್ಕಳಲ್ಲಿ ವಿವಿಧ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅವರಲ್ಲಿನ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನು ಗುರುತಿಸುವುದು ಮಾಡಲಾಯಿತು. ಪಿ.ಟಿ.ಎ. ಅಧ್ಯಕ್ಷ ವಿಶ್ವನಾಥ ಬಳ್ಳಪದವು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಶೀಜಾ, ಎಂಪಿಟಿಎ ಬೀಫಾತಿಮಾ, ಶಿಕ್ಷಕ ರಾಜೇಶ್ ಮಾತನಾಡಿದರು.