HEALTH TIPS

ಲೇಬರ್ ಟ್ಯಾಕ್ಸ್ ಹೆಸರಲ್ಲಿ ಕೇರಳ ಸರ್ಕಾರ ಹಗಲು ದರೋಡೆ-ಬಿಜೆಪಿ

ಮಂಜೇಶ್ವರ:ರಾಜ್ಯ ಸರ್ಕಾರ ಕೇರಳದ ಬಡ ಜನರನ್ನು ವಂಚಿಸುತ್ತಿದೆ, ಕಷ್ಟದಿಂದ ಮನೆ ನಿರ್ಮಿಸುವ  ಜನರಿಗೆ ಜಮೀನು ಖರೀದಿ, ನೋಂದಣಿ ದರ ಹೆಚ್ಚಿಸಿದ ಸರ್ಕಾರ ಈಗ ಕಟ್ಟಿದ ಮನೆಗೆ ನಂಬರ್ ನೀಡಬೇಕಾದರೆ ಲೇಬರ್ ಟ್ಯಾಕ್ಸ್ ಹೆಸರಲ್ಲಿ ಹಗಲು ದರೋಡೆಗೆ ಇಳಿದಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಸರ್ಕಾರದ ಜನವಿರೋಧಿ ಕ್ರಮವನ್ನು ಖಂಡಿಸಿದರು. 

1000 ಸ್ಕ್ಯಾರ್ ಫೀಟ್ ಮನೆ ನಿರ್ಮಾಣ ಮಾಡಿದರೆ 11ಸಾವಿರ ಕ್ಕೂ ಅಧಿಕ ಲೇಬರ್ ಟ್ಯಾಕ್ಸ್ ವಸೂಲು ಮಾಡುವ ಸರ್ಕಾರದ ಲೂಟಿ ಒಪ್ಪಲು ಸಾಧ್ಯವಿಲ್ಲ ಎಂದರು.

ಬಿಜೆಪಿ ಮಂಡಲ ಕೋರ್ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮನೆ ಕಟ್ಟುವವರು ನೌಕರರಿಗೆ ವೇತನ ನೀಡಿಯೇ ಕಾಮಗಾರಿಗಳನ್ನು ನಿರ್ವಹಿಸುತ್ತಾರೆ. ಹಾಗಿರುವಾಗ ಸರ್ಕಾರ ಲೇಬರ್ ಟ್ಯಾಕ್ಸ್ ಹೆಸರಲ್ಲಿ ಆನವಶ್ಯಕ ಹಣ ಸಂಗ್ರಹ ಸಾಮಾನ್ಯ ನಾಗರಿಕರಿಗೆ ಮಾಡುವ ವಂಚನೆ ಮಾತ್ರವಲ್ಲ ಮನೆ ನಂಬರ್ ನೀಡಲು ಲೇಬರ್ ಟ್ಯಾಕ್ಸ್ ಕಡ್ಡಾಯ ಮಾಡಿರುವ ಕ್ರಮವು ದೊಡ್ಡ ಹೊರೆಯಾಗಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ.

ಕೆಂಪುಕಲ್ಲು ಉದ್ಯಮವನ್ನು ಸಂಪೂರ್ಣ ನಿಲ್ಲಿಸುವಂತೆ ಆದೇಶ ಹೊರಡಿಸಿದ ಕಾಸರಗೋಡು ಜಿಲ್ಲಾಧಿಕಾರಿಗಳ ಕ್ರಮದಿಂದ ನೌಕರರು, ಕಟ್ಟಡ ನಿರ್ಮಾಣ ಮನೆ ನಿರ್ಮಾಣ ಸ್ಥಗಿತವಾಗಿದೆ. ಜಿಲ್ಲಾಧಿಕಾರಿಗಳು ತಮ್ಮ ಕ್ರಮವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದರು.

ಮುಖಂಡರಾದ ಅಶ್ವಿನಿ ಎಂ.ಎಲ್, ಮಣಿಕಂಠ ರೈ, ಯತೀರಾಜ್ ಶೆಟ್ಟಿ, ಎ.ಕೆ.ಕಯ್ಯಾರ್, ತುಳಸಿ ಕುಮಾರಿ, ಯಾದವ ಬಡಾಜೆ, ಕೆ.ವಿ.ಭಟ್, ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries