ಕಾಸರಗೋಡು: ತಳಂಗರೆ ಮುಸ್ಲಿಂ ಸರ್ಕಾರಿ ವೊಕೇಷನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಉಪಜಿಲ್ಲಾ ಶಾಲಾ ವಿಜ್ಞಾನ, ಸಾಮಾಜಿಕ ವಿಜ್ಞಾನ, ಐಟಿ, ಗಣಿತ, ವೃತ್ತಿ ಪರಿಚಯ ಮೇಳ ಸಮಾರೋಪಗೊಂಡಿತು.
ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ಪ್ರಾಯೋಗಿಕ ಮತ್ತು ಐಟಿ ಮೇಳಗಳಲ್ಲಿ ವಿವಿಧ ಶಾಲೆಗಳ ಸುಮಾರು 500 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭವನ್ನು ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಉದ್ಘಾಟಿಸಿದರು. ಈ ಸಂದರ್ಭ ವಿಜ್ಞಾನಮೇಳಕ್ಕಾಗಿ ಲಾಂಛನ ತಯಾರಿಸಿ ನೀಡಿದ ರಾಜೇಶ್ ಉದಯಗಿರಿ ಮತ್ತು ಭೋಜನ ವ್ಯವಸ್ಥೆ ಸಿದ್ಧಪಡಿಸಿದ ಮಾಧವನ್ ನಂಬೂತಿರಿ ಹಾಗೂ ರಾಜ್ಯ ವಿಜ್ಞಾನಮೇಳ ವಿಜೇತ ಡಾ.ನಿಮಿಶಾ ಸೋಮನ್ ಅವರನ್ನು ಸನ್ಮಾನಿಸಲಾಯಿತು. ವಿಜೇತರಿಗೆ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಬಹುಮಾನ ವಿತರಿಸಿದರು. ನಗರಸಭಾ ಸದಸ್ಯರಾದ ಕೆ.ಎಂ.ಹನೀಫ್, ರಜಿನಿ ಕೆ, ಪ್ರಾಂಶುಪಾಲ ವಿ.ನಾರಾಯಣನ್ ಕುಟ್ಟಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನೌಫಲ್ ತಾಯಲ್, ಉಪಾಧ್ಯಕ್ಷ ಅಹ್ಮದ್ ಬದರುದ್ದೀನ್, ಪ್ರಚಾರ ವಿಭಾಗದ ಅಧ್ಯಕ್ಷ ಟಿ.ಎ.ಶಾಫಿ, ಕೈಟ್ ಮಾಸ್ಟರ್ ಟ್ರೈನರ್ ಅಬ್ದುಲ್‍ಖಾದರ್, ಉಪ ಜಿಲ್ಲಾ ಗಣಿತ ಕ್ಲಬ್ ಕಾರ್ಯದರ್ಶಿ ಕೃಷ್ಣದಾಸ್ ಪಾಲೇರಿ, ಹಳೇ ವಿದ್ಯಾರ್ಥಿ ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಶರಫುನ್ನೀಸಾ ಶಾಫಿ, ಸಿಬ್ಬಂದಿ ಕಾರ್ಯದರ್ಶಿ ಮುಹಮ್ಮದ್ ಶರೀಫ್, ಸುನೈಸ್ ಅಬ್ದುಲ್ಲಾ ಉಪಸ್ಥಿತರಿದ್ದರು. ಉಪಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟಿನ್ ಬರ್ನಾಡ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ಜಿಲ್ಜೋ ಎನ್ ಗೋವಿಂದ್ ವಂದಿಸಿದರು.