ಮಂಜೇಶ್ವರ: ಉತ್ತಮ ನಡೆಯೊಂದಿಗೆ ಒಗ್ಗಟ್ಟಿನ ಪ್ರದರ್ಶನ. ಕೇಸರಿ ಬಣ್ಣವೇ ನಮ್ಮೆಲ್ಲರ ಹೆಮ್ಮೆಯ, ಹಿರಿಯರ ತ್ಯಾಗದ ಸಂಕೇತವಾಗಿದೆ. ಸಂಘದ ಉಗಮವೇ ಒಟ್ಟು ಗೂಡಿಸುವ ಉದ್ದೇಶವನ್ನು ಹೊಂದಿದೆ. ಇಡಿ ದೇಶ ಒಂದು ಎಂಬುದು ಅದರಲ್ಲಿ ಅಡಗಿದೆ. ತಾಯಿಯ ಮಾನ ಹಾನಿ ನಾವು ಸಹಿಸಲಾರೆವು. ದೇಶ ಸೇವೆಗೆ ಕನಿಷ್ಠ ಒಂದು ಗಂಟೆಯಾದರೂ ಮೀಸಲಿಡುವ ಅನಿವಾರ್ಯತೆ ನಮ್ಮ ಮುಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಆಮಂತ್ರಿತ ಸದಸ್ಯರು ಕಲ್ಲಡ್ಕ ಡಾ.ಪ್ರಭಾಕರ ಭಟ್ ಬೌದ್ದಿಕ್ ನೀಡಿ ಮಾತನಾಡಿದರು.
ಸಂತಡ್ಕ ಅರಸು ಸಂಕಲ ದೈವ ಕ್ಷೇತ್ರದ ವಠಾರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಜೇಶ್ವರ ಖಂಡ್ ಇದರ ವೈಭವದ ವಿಜಯದಶಮಿ ಪಥಸಂಚಲನ ಹಾಗೂ ಸಾರ್ವಜನಿಕ ಸಮಾರಂಭದಲ್ಲಿÀವರು ಮಾತನಾಡಿದರು.
ಸಾರ್ವಜನಿಕ ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ಯೋಧರಾದ ಸುನಿಲ್ ಮಂಜೇಶ್ವರ ವಹಿಸಿದ್ದರು.ಕಣ್ಣೂರು ವಿಭಾಗ ಕಾರ್ಯವಾಹ ಲೋಕೇಶ್ ಜೋಡುಕಲ್ಲು ಉಪಸ್ಥಿತರಿದ್ದರು.
ಅಶ್ವಯುಜ ಶುಕ್ಲ ದಶಮಿಯಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಜೇಶ್ವರ ಖಂಡ್ ವಿಭಾಗದ ವಿಜಯ ದಶಮಿ ಉತ್ಸವದ ಪಥಸಂಚಲನವು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರಿಸರದಿಂದ ಸಂತಡ್ಕ ಶ್ರೀ ಅರಸು ಸಂಕಲ ದೈವಕ್ಷೇತ್ರದ ವರಗೆ ಜರಗಿತು.
ಸಾವಿರಕ್ಕಿಂತಲೂ ಹೆಚ್ಚಿನ ಪೂರ್ಣ ಗಣವೇಷಧಾರಿಗಳು ಪಥಸಂಚಲನದಲ್ಲಿ ಪಾಲ್ಗೊಂಡರು.
ಪಥಸಂಚಲನದ ವಿಶೇಷತೆ:
* ಪಥಸಂಚಲನ ಹಾದು ಬರುವ ಮಾರ್ಗದ ಉದ್ದಕ್ಕೂ ಮಾತೆಯರು, ಮಕ್ಕಳಿಂದ ಭಗವಾಧ್ವಜಕ್ಕೆ ಪುಷ್ಪಾರ್ಚನೆ.
* ಸಾವಿರಾರು ಸ್ವಯಂಸೇವಕರಿಂದ ಸಾಮೂಹಿಕ ಶಾರೀರಿಕ ಪ್ರದರ್ಶನ.
* ನಿಯುದ್ದ, ದಂಡಪ್ರಹಾರ, ಯೋಗ, ಸಮಾತಾ ದರ್ಶನ.
* ಪಥ ಸಂಚಲನದುದ್ದಕೂ ಘೋಷ್‍ನ ಮೆರುಗು.