ಡೇರ್ ಅಲ್ ಬಾಲಾ : ಗಾಜಾಪಟ್ಟಿಯ ಉತ್ತರ ಭಾಗವನ್ನು ಹಾಗೂ ಗಾಜಾ ನಗರವನ್ನು ಸಂಪೂರ್ಣವಾಗಿ ತೆರವು ಮಾಡುವಂತೆ ಇಸ್ರೇಲ್ ಸೇನೆಯು ಪ್ಯಾಲೆಸ್ಟೀನಿಯನ್ನರಿಗೆ ಹೊಸ ಆದೇಶ ಹೊರಡಿಸಿದೆ.
ಡೇರ್ ಅಲ್ ಬಾಲಾ : ಗಾಜಾಪಟ್ಟಿಯ ಉತ್ತರ ಭಾಗವನ್ನು ಹಾಗೂ ಗಾಜಾ ನಗರವನ್ನು ಸಂಪೂರ್ಣವಾಗಿ ತೆರವು ಮಾಡುವಂತೆ ಇಸ್ರೇಲ್ ಸೇನೆಯು ಪ್ಯಾಲೆಸ್ಟೀನಿಯನ್ನರಿಗೆ ಹೊಸ ಆದೇಶ ಹೊರಡಿಸಿದೆ.
ಈ ಭಾಗದ ಆಸ್ಪತ್ರೆಗಳಲ್ಲಿನ ರೋಗಿಗಳೂ ಸ್ಥಳಾಂತರಗೊಳ್ಳಬೇಕು ಎಂದೂ ಇಸ್ರೇಲ್ ತಿಳಿಸಿದೆ.
ಯುದ್ಧ ಆರಂಭವಾದ ಕೆಲ ದಿನಗಳ ಬಳಿಕ, ಇಸ್ರೇಲ್ ಸೇನೆಯು ಗಾಜಾಪಟ್ಟಿಯ ಉತ್ತರ ಭಾಗದಲ್ಲಿದ್ದ ಜನರನ್ನು ತೆರವು ಮಾಡಿಸಿತ್ತು. ಒಂದು ವರ್ಷ ಸತತ ದಾಳಿಯ ಬಳಿಕವೂ ಈ ಭಾಗದಲ್ಲಿ 4 ಲಕ್ಷ ಪ್ಯಾಲೆಸ್ಟೀನಿಯರು ಉಳಿದುಕೊಂಡಿದ್ದರು. ಗಾಜಾಪಟ್ಟಿಯ ಕೇಂದ್ರ ಭಾಗದ ಮೇಲೆ ಇಸ್ರೇಲ್ ವಾಯುದಾಳಿ ಮುಂದುವರಿಸಿದ್ದು, ಒಂದೇ ಕುಟುಂಬದ ಎಂಟು ಮಂದಿ ಮೃತಪಟ್ಟಿದ್ದಾರೆ.