HEALTH TIPS

ರಾಜೀನಾಮೆಗೆ ಒತ್ತಾಯಿಸಿದ ಸಂಸದರ ಅಭಿಪ್ರಾಯ ತಿರಸ್ಕರಿಸಿದ ಕೆನಡಾ ಪ್ರಧಾನಿ ಟ್ರುಡೊ

 ಟೊರೆಂಟೊ: ಆಡಳಿತಾರೂಢ ಸಂಸದರ ರಾಜೀನಾಮೆ ಒತ್ತಾಯವನ್ನು ತಿರಸ್ಕರಿಸಿರುವ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಮುಂಬರುವ ಚುನಾವಣೆಯಲ್ಲೂ 4ನೇ ಬಾರಿಗೆ ಪಕ್ಷವನ್ನು ಮುನ್ನಡೆಸಲು ನಿರ್ಧರಿಸಿದ್ದಾರೆ.

ಲಿಬರಲ್ ಪಕ್ಷದ ಸಂಸದರ ಜೊತೆ 3 ಗಂಟೆಗಳ ಕಾಲ ಮಾತುಕತೆ ನಡೆಸಿದ ಟ್ರುಡೊ ಅವರಿಗೆ ಮುಂದಿನ ಚುನಾವಣೆಗೂ ಮುನ್ನ ತಾವು ರಾಜೀನಾಮೆ ನೀಡಬೇಕೆಂದು 20ಕ್ಕೂ ಅಧಿಕ ಸಂಸದರು ಪತ್ರಕ್ಕೆ ಸಹಿ ಹಾಕಿರುವುದು ಗಮನಕ್ಕೆ ಬಂದಿದೆ.

ಮುಂದೆ ಪಕ್ಷವನ್ನು ಉತ್ತಮ ಮಾರ್ಗದಲ್ಲಿ ಮುನ್ನಡೆಸುವ ಕುರಿತು ದೃಢವಾದ ಮಾತುಗಳು ಕೇಳಿಬರುತ್ತಿವೆ. ಆದರೆ, ಮುಂದಿನ ಚುನಾವಣೆಗೆ ಹೋಗುವ ನಾಯಕನಾಗಿ ಅದು ನನ್ನಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಒಂದು ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ಕೆನಡಾದ ಪ್ರಧಾನ ಮಂತ್ರಿಯೊಬ್ಬರು ಸತತ ನಾಲ್ಕನೇ ಬಾರಿ ಗೆದ್ದ ಉದಾಹರಣೆಗಳಿಲ್ಲ.

ಈ ನಡುವೆ, ಹೌಸ್ ಆಫ್ ಕಾಮನ್ಸ್‌ನ ಲಿಬರಲ್ ಪಕ್ಷದ 153 ಸದಸ್ಯರ ಬೆಂಬಲ ಟ್ರುಡೊ ಅವರಿಗೆ ಇದೆ ಎಂದು ಸಂಪುಟ ಸದಸ್ಯರು ಹೇಳಿದ್ದಾರೆ.

ಟ್ರುಡೊ ರಾಜೀನಾಮೆಗೆ ಒತ್ತಾಯಿಸಿ ಪತ್ರಕ್ಕೆ ಸಹಿ ಹಾಕಿದ ಸಂಸದರಲ್ಲಿ ಒಬ್ಬರಾದ ಸೀನ್ ಕೆಸೆಯ್, ತಮ್ಮ ಅಭಿಪ್ರಾಯವನ್ನು ಆಲಿಸಿದ ಟ್ರುಡೊ ನಿರ್ಧಾರ ಪ್ರಕಟಿಸಲು ಯಾವುದೇ ಸಮಯ ತೆಗೆದುಕೊಳ್ಳದೇ ಕೂಡಲೇ ತಾನು ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುತ್ತೇನೆ ಎಂದಿರುವುದು ಹತಾಶೆ ಮೂಡಿಸಿದೆ ಎಂದಿದ್ದಾರೆ.

ಟೊರೊಂಟೊ ಮತ್ತು ಮಾಂಟ್ರಿಯಲ್‌ನಲ್ಲಿ ಎರಡು ಜಿಲ್ಲೆಗಳನ್ನು ಪ್ರತಿನಿಧಿಸುವ ಸ್ಥಾನಗಳಿಗೆ ನಡೆದ ವಿಶೇಷ ಚುನಾವಣೆಗಳಲ್ಲಿ ಲಿಬರಲ್‌ ಪಕ್ಷವು ಹಿನ್ನಡೆ ಅನುಭವಿಸಿದೆ. ಪಕ್ಷವು ಹಲವು ವರ್ಷಗಳಿಂದ ಪ್ರತಿನಿಧಿಸುತ್ತಿದ್ದ ಸ್ಥಾನಗಳನ್ನು ಕಳೆದುಕೊಂಡ ಬಳಿಕ ಟ್ರುಡೊ ನಾಯಕತ್ವದ ಬಗ್ಗೆ ಅನುಮಾನಗಳು ಹುಟ್ಟುಕೊಂಡಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries