ಮಂಜೇಶ್ವರ: ಧರ್ಮ ಅರಸು ಶ್ರೀ ತೋಡಕುಕ್ಕಿನಾರ್ ದೈವಸ್ಥಾನ ಕಣಂತೂರು ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಇತ್ತೀಚೆಗೆ ‘ಶ್ರೀ ಗುರುನರಸಿಂಹ ಯಕ್ಷಬಳ ಮೀಯಪದವು’ ತಂಡದ ಅತಿಕಾಯ ಮೋಕ್ಷ ತಾಳಮದ್ದಳೆ ಪ್ರಸ್ತುತಿಗೊಂಡಿತು.
ಹಿಮ್ಮೇಳದಲ್ಲಿ ರಾಮಪ್ರಸಾದ ಮಯ್ಯ ಕೂಡ್ಲು(ಭಾಗವತರು), ಚೆಂಡೆ ಮದ್ದಳೆಯಲ್ಲಿ ಶ್ರೀಕುಮಾರ್, ಪೃಥ್ವಿ ಬಾಯಾರು ಭಾಗವಹಿಸಿದ್ದು ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ರಾಜಾರಾಮ ರಾವ್ ಮೀಯಪದವು, ಯೋಗೀಶ ರಾವ್ ಚಿಗುರುಪಾದೆ, ನಾಗರಾಜ ಪದಕಣ್ಣಾಯ ಮೂಡಂಬೈಲು, ಗುರುಪ್ರಸಾದ ಹೊಳ್ಳ ತಿಂಬರ, ಡಾ. ಅಭಿಲಾಷ್ ಮಯ್ಯ ಕಡೆಗದ್ದೆ ಭಾಗವಹಿಸಿದ್ದರು.