HEALTH TIPS

ಎಡ ಮತ್ತು ಬಲ ರಂಗಗಳಿಗೆ ಜಾತ್ಯತೀತ ಶಬ್ದವೆತ್ತುವ ಹಕ್ಕಿಲ್ಲ: ಶೋಭಾ ಸುರೇಂದ್ರನ್

ಪಾಲಕ್ಕಾಡ್: ಸಿಮಿ ನಾಯಕನನ್ನು ಅಭ್ಯರ್ಥಿಯನ್ನಾಗಿಸಿ, ಧಾರ್ಮಿಕ ಉಗ್ರಗಾಮಿ ಮದನಿಯೊಂದಿಗೆ ವೇದಿಕೆ ಹಂಚಿಕೊಂಡ ಪಿಣರಾಯಿ ವಿಜಯನ್ ಮತ್ತು ಯುಡಿಎಫ್‍ಗೆ ಜಾತ್ಯತೀತತೆಯ ಬಗ್ಗೆ ಮಾತನಾಡಲು ಯಾವ ಹಕ್ಕಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಶೋಭಾ ಸುರೇಂದ್ರನ್ ಪ್ರಶ್ನಿಸಿದ್ದಾರೆ.

ಕ್ಷೇತ್ರದಲ್ಲಿ ಪಕ್ಷದ ಚಿಹ್ನೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗದಷ್ಟು ಹದಗೆಟ್ಟ ಸ್ಥಿತಿಯಲ್ಲಿ ಸಿಪಿಎಂ ಇದೆ. ಸ್ಥಾನ ಸಿಗದ ಹಿನ್ನೆಲೆಯಲ್ಲಿ ಪಕ್ಷ ಬದಲಿಸಿದ ರಾಯ್ಕುರಮಣಂ ಅಂತಿಮವಾಗಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಪಾಲಕ್ಕಾಡ್ ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೆÇೀಟಿ ಏರ್ಪಟ್ಟಿದೆ. ಈ ಚುನಾವಣೆಯಿಂದ ಮೋರ್ಚಾಗಳ ನಕಲಿ ಸೆಕ್ಯುಲರಿಸಂನ ಮುಖವಾಡ ಕಳಚಿ ಬೀಳಲಿದೆ. ಐದನೇ ಸಚಿವ ಸ್ಥಾನವನ್ನು ಲೀಗ್‍ಗೆ ಬಿಟ್ಟುಕೊಟ್ಟ ಪಕ್ಷ ಕಾಂಗ್ರೆಸ್. ಭಯೋತ್ಪಾದಕರು ಮತ್ತು ಮೂಲಭೂತವಾದಿಗಳಿಗೆ ಅಡ್ಡಗಾಲು ಹಾಕುವ ರಂಗಗಳ ವಿರುದ್ಧ ಸಾರ್ವಜನಿಕ ಭಾವನೆ ಮೂಡಿದೆ. ಪಿಣರಾಯಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಚಕಾರ ಎತ್ತಲು ಕಾಂಗ್ರೆಸ್‍ಗೆ ಸಾಧ್ಯವಾಗುತ್ತಿಲ್ಲ. ಶಾಸಕಾಂಗದೊಳಗೆ ಎರಡೂ ಗುಂಪುಗಳು ಒಗ್ಗಟ್ಟಾಗಿವೆ. ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನ ಪಾಲಕ್ಕಾಡ್ ಬದಲಾವಣೆಯ ನಾಂದಿಯಾಗಲಿದೆ ಎಂದು ಶೋಭಾ ಸುರೇಂದ್ರನ್ ಹೇಳಿರುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries