ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ಮಟ್ಟದ ಒಲಂಪಿಕ್ಸ್ ವಿವಿಧ ಸ್ಪರ್ಧೆಗಳೊಂದಿಗೆ ನಡೆಯಿತು. ಶಾಲಾ ಪಿ.ಟಿ.ಎ ಅಧ್ಯಕ್ಷ ಇಬ್ರಾಹಿಂ ಹನೀಫಿ ಒಲಂಪಿಕ್ಸ್ ಕ್ರೀಡಾ ಕೂಟವನ್ನು ಧ್ವಜಾರೋಹಣಗೈದು ಉದ್ಘಾಟಿಸಿದರು. ಮಂಜೇಶ್ವರ ಬಿ.ಆರ್.ಸಿಯ ತರಬೇತುದಾರರಾದ ಉಮಾದೇವಿ ಹಾಗು ಸಿ.ಆರ್.ಸಿಯ ಸಂಯೋಜಕ ತಿಲಕ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ, ಅಬ್ದುಲ್ ಬಶೀರ್ ಸುಬ್ಬಯಕಟ್ಟೆ ವಂದಿಸಿದರು. ರೀಯಾಸ್ ಪೆರಿಂಗಡಿ ಕಾರ್ಯಕ್ರಮ ನಿರ್ವಹಿಸಿದರು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪಿ.ಟಿ.ಎ ಸಮಿತಿ ಸಹಭಾಗಿತ್ವದಲ್ಲಿ ಬಹುಮಾನ ವಿತರಿಸಲಾಯಿತು. ವಿಜಯಿಶಾಲಿಯಾದ ಹಳದಿ ತಂಡ ವಿನ್ನರ್ಸ್ ಟ್ರೋಫಿಯನ್ನು ಶಿಕ್ಷಕಿ ಕಾವ್ಯಾಂಜಲಿ ಹಾಗು ಹಳದಿ ತಂಡದ ಸದಸ್ಯರಿಗೆ ಶಿಕ್ಷಕಿ ಕಾವ್ಯ ಮತ್ತು ನೀಲಿ ತಂಡ ಸದಸ್ಯರಿಗೆ ರನ್ನರ್ಸ್ ಟ್ರೋಫಿಯನ್ನು ಮುಖ್ಯ ಶಿಕ್ಷಕಿ ಚಿತ್ರಾವತಿ ನೀಡಿದರು.