ಮುಳ್ಳೇರಿಯ: ಬೋವಿಕ್ಕಾನ ಬಳಿಯ ಪೊವ್ವಲ್ ಬೆಂಚ್ ಕೋರ್ಟ್ ಸಮೀಪದ ಪಿ.ಎ.ಜಾಫರ್ ಅವರ ಪತ್ನಿ ಅಲೀಮ ಯಾನೆ ಶೈಮ(35) ಆತ್ಮಹತ್ಯೆ ಕುರಿತಾಗಿ ಬರೆದಿಟ್ಟ ಪತ್ರ ಪತ್ತೆಯಾಗಿದೆ. ಅದರಲ್ಲಿ ಬೆಚ್ಚಿ ಬೀಳಿಸುವ ಕೆಲವು ಮಾಹಿತಿಗಳಿವೆಯೆನ್ನಲಾಗಿದೆ. ತನಿಖೆಗೆ ಅಡ್ಡಿಯಾಗಬಹುದೆಂಬ ಕಾರಣದಿಂದ ಪತ್ರದಲ್ಲಿರುವ ಮಾಹಿತಿಗಳನ್ನು ಪೆÇಲೀಸರು ಬಹಿರಂಗಪಡಿಸಿಲ್ಲ.
ಕಳೆದ ಮಂಗಳವಾರ ರಾತ್ರಿ ಅಲೀಮ ಮನೆಯ ಬಾತ್ ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿತ್ತು. ಪತಿಯ ಕಿರುಕುಳ ಸಹಿಸಲಾಗದೆ ಅಲೀಮ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಂಬಂಧಿಕರು ಆರೋಪಿಸಿದ್ದಾರೆ. ಅಲೀಮ ಕರ್ನಾಟಕದ ಸುಳ್ಯ ಜಯನಗರ ನಿವಾಸಿಯಾಗಿದ್ದಾರೆ.