ಮಧೂರು: ಅಂತಾರಾಷ್ಟ್ರೀಯ ವಯೋಜನ ದಿನದ ಪ್ರಯುಕ್ತ ದಿನಾಚರಣೆಯನ್ನು ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘದ ಮಧೂರು ಘಟಕದ ಆಶ್ರಯದಲ್ಲಿ ಅ. 1 ರಂದು ಮಧೂರಿನಲ್ಲಿ ಆಚರಿಸಲಾಯಿತು. ಸಂಘದ ಹಿರಿಯ ಸದಸ್ಯ,ಹಿರಿಯ ಯಕ್ಷಗಾನ ಕಲಾವಿದ, ಪ್ರಸಂಗಕರ್ತ ವೆಂಕಟಕೃಷ್ಣ ಮಧೂರು ಅವರನ್ನು ಅವರ ಮನೆಯಲ್ಲಿ ಗೌರವಿಸಲಾಯಿತು.
ಪ್ರೇಮಲತಾ ಟೀಚರ್ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು. ಘಟಕದ ಉಪಾಧ್ಯಕ್ಷ ಸತ್ಯನಾರಾಯಣ ತಂತ್ರಿ ಸ್ವಾಗತಿಸಿದರು. ಮಧೂರು ಘಟಕದ ಗೌರವಾಧ್ಯಕ್ಷ ಕಕ್ಕೆಪ್ಪಾಡಿ ವಿಷ್ಣು ಭಟ್ ಅವರು ವೆಂಕಟಕೃಷ್ಣ ಅವರ ಸಾಧನೆಗಳ ಬಗ್ಗೆ ವಿವರಿಸಿ ಸನ್ಮಾನಿತರನ್ನು ಪರಿಚಯ ಮಾಡಿದರು.
ವೆಂಕಟಕೃಷ್ಣ ದಂಪತಿಗಳನ್ನು ಅಧ್ಯಕ್ಷ ನಾರಾಯಣ ಎಂ.ಶಾಲು ಹೊದಿಸಿ ಗೌರವಿಸಿದರು. ಕೇಶವ ಭಟ್ ಹಾಗೂ ಸವಿತಾ ಟೀಚರ್ ಅವರು ಫಲಪುಷ್ಪ ನೀಡಿದರು. ಕೇಶವ ಭಟ್ ಮನ್ನಿಪ್ಪಾಡಿ, ಬಾಲಕೃಷ್ಣ ಉಳಿಯ ಹಾಗೂ ಸವಿತಾ ಟೀಚರ್ ಅವರು ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು. ಜೊತೆಕಾರ್ಯದರ್ಶಿ ನೂತನಕುಮಾರಿ ವಂದಿಸಿದರು. ಕಾರ್ಯದರ್ಶಿ ಬಲರಾಮ ಭಟ್ ಮಧೂರು ಕಾರ್ಯಕ್ರಮ ನಿರೂಪಿಸಿದರು.