HEALTH TIPS

Bomb Threats: ಮತ್ತೆ 25ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ

         ವದೆಹಲಿ/ ಮುಂಬೈ: ಭಾರತೀಯ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನಗಳಿಗೆ ಬಾಂಬ್‌ ಬೆದರಿಕೆ ಸಂದೇಶಗಳು ಬರುವುದು ಮುಂದುವರಿದಿದೆ. ಇಂದು(ಶುಕ್ರವಾರ) ಕೂಡ 25 ಕ್ಕೂ ಹೆಚ್ಚು ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

        ಇಂಡಿಗೋ, ವಿಸ್ತಾರ ಮತ್ತು ಸ್ಪೈಸ್‌ ಜೆಟ್‌ನ ತಲಾ 7 ವಿಮಾನಗಳಿಗೆ ಹಾಗೂ ಏರ್ ಇಂಡಿಯಾದ 6 ವಿಮಾನಗಳಿಗೆ ಬೆದರಿಕೆಗಳು ಬಂದಿವೆ.

        ಇಂಡಿಗೋದ 6E 87 ವಿಮಾನ (ಕೋಯಿಕ್ಕೋಡ್‌- ದಮ್ಮಾಮ್‌), 6E 2099 (ಉದಯಪುರ-ದೆಹಲಿ), 6E 11 (ದೆಹಲಿ- ಇಸ್ತಾಂಬುಲ್), 6E 58 (ಜಿದ್ದಾ-ಮುಂಬೈ), 6E 17 (ಮುಂಬೈ-ಇಸ್ತಾಂಬುಲ್), 6E 108 (ಹೈದರಾಬಾದ್‌-ಚಂಡೀಗಢ) ಮತ್ತು 6E 133 (ಪುಣೆ-ಜೋಧಪುರ) ವಿಮಾನಗಳಿಗೆ ಬೆದರಿಕೆ ಸಂದೇಶಗಳು ಬಂದಿವೆ ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.

         12 ದಿನಗಳಲ್ಲಿ, 275 ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ವಿಮಾನಯಾನ ಸಂಸ್ಥೆಗಳಿಗೆ ಬರುತ್ತಿರುವ ಹುಸಿ ಬಾಂಬ್‌ ಬೆದರಿಕೆ ಸಂದೇಶಗಳು ಮತ್ತು ಕರೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇವುಗಳ ಹಿಂದಿರುವವರನ್ನು ಗುರುತಿಸಲು ಪ್ರಾರಂಭಿಸಿದೆ.

           ಈ ರೀತಿಯ ಸಂದೇಶಗಳ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಮೆಟಾ ಮತ್ತು ಎಕ್ಸ್‌ಗೆ ಸೂಚನೆ ನೀಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries