HEALTH TIPS

BREAKING: ಕೊನೆಗೂ ಸಚಿತಾ ರೈ ಬಲೆಗೆ: ನ್ಯಾಯಾಲಯಕ್ಕೆ ಶರಣಾಗುವ ಮಧ್ಯೆ ಪೋಲೀಸರ ಕಾರ್ಯಾಚರಣೆ: ವಶಕ್ಕೆ

ಕಾಸರಗೋಡು: ಉದ್ಯೋಗ ಭರವಸೆ ನೀಡಿ ಕೋಟಿ-ಕೋಟಿ ಹಣ ದೋಚಿದ ಪ್ರಕರಣದ ಆರೋಪಿ, ಡಿ.ವೈ.ಎಫ್.ವೈ. ನೇತಾರೆ, ಬಾಡೂರು ಶಾಲಾ ಶಿಕ್ಷಕಿಯೂ ಆದ ಸಚಿತಾ ರೈ(27) ಅವರನ್ನು ಕೊನೆಗೂ ಬಂಧಿಸಲಾಗಿದೆ.ಇಂದು(ಗುರುವಾರ) ಸಂಜೆ ವಿದ್ಯಾನಗರದಿಂದ ವಶಕ್ಕೆ ಪಡೆಯಲಾಗಿದೆ.

ವಿದ್ಯಾನಗರದಲ್ಲಿ ವಕೀಲರನ್ನು ಭೇಟಿಯಾಗಿ ನ್ಯಾಯಾಲಯಕ್ಕೆ ಹಾಜರಾಗುವ ಹುನ್ನಾರದ ಮಧ್ಯೆ ನ್ಯಾಯಾಲಯದ ಹೊರಗಡೆ ದೌಡಾಯಿಸುತ್ತಿದ್ದ ವೇಳೆ, ಮಹಿಳಾ ಪೋಲೀಸ್ ಅಧಿಕೃತರ ಸಮಕ್ಷಮ ವಿದ್ಯಾನಗರ ಪೋಲೀಸರು ಸಿನಿಮೀಯ ರೀತಿಯಲ್ಲಿ ಸೆರೆಹಿಡಿದಿದ್ದಾರೆ.

ಬಳಿಕ ಆಕೆಯನ್ನು ವಿದ್ಯಾನಗರ ಠಾಣೆಗೆ ಕರೆದೊಯ್ಯಲಾಯಿತು.ವಿಷಯವಾಗಿ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ಪೋಲೀಸ್ ಮೂಲಗಳು ತಿಳಿಸಿವೆ.

ಪ್ರಕರಣಗಳು ಬಯಲಿಗೆ ಬರುತ್ತಿರುವಂತೆ ಕಳೆದ ಎರಡು ವಾರಗಳಿಂದ ಸಚಿತಾ ರೈ ನಾಪತ್ತೆಯಾಗಿದ್ದರು. ಈಕೆಯ ಮೇಲೆ ಹಣ ವಂಚನಾ ಪ್ರಕರಣದಲ್ಲಿ ಕಾಸರಗೋಡು, ಕುಂಬಳೆ, ಬದಿಯಡ್ಕ, ಮಂಜೇಶ್ವರ, ಆದೂರು, ಮೇಲ್ಪರಂಬು, ಕರ್ನಾಟಕದ ಉಪ್ಪಿನಂಗಡಿ, ಠಾಣೆಗಳಲ್ಲಿ 12ರಷ್ಟು ಪ್ರಕರಣಗಳು ದಾಖಲಾಗಿವೆ.

ಸಿಪಿಸಿಆರ್‍ಐ, ಕೇಂದ್ರೀಯ ವಿದ್ಯಾಲಯ, ಎಸ್‍ಬಿಐ, ಕರ್ನಾಟಕ ಅಬಕಾರಿ ಮತ್ತು ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹಲವರಿಂದ ಹಣ ವಸೂಲಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.  ಕೇರಳ ಗ್ರಾಮೀಣ ಬ್ಯಾಂಕ್‍ನ ಪೆರ್ಲ ಶಾಖೆಯಲ್ಲಿರುವ ಸಚಿತಾ ಅವರ ಖಾತೆಗೆ ಮತ್ತು ಕೆನರಾ ಬ್ಯಾಂಕ್‍ನ ಪೆರ್ಲ ಶಾಖೆಯಲ್ಲಿನ ಖಾತೆಗೆ ಹಣ ಕಳುಹಿಸಲು ಹೇಳಿರುವುದಾಗಿ ದೂರುದಾರರು ಹೇಳುತ್ತಾರೆ.

ಬ್ಯಾಂಕ್‍ಗಳ ಮೂಲಕ ಐದು ಕೋಟಿ ರೂಪಾಯಿಗೂ ಹೆಚ್ಚು ಹಣಕಾಸು ವ್ಯವಹಾರ ನಡೆದಿರುವುದನ್ನು ಪೋಲೀಸರು ಪ್ರಾಥಮಿಕವಾಗಿ ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿದೆ.  ಉಡುಪಿಯಲ್ಲಿ ನೇಮಕಾತಿ ಸಂಸ್ಥೆ ನಡೆಸುತ್ತಿರುವ ಚಂದ್ರಶೇಖರ ಕುಂಟಾರ್ ಎಂಬವರ ಮೂಲಕ ಸಚಿತಾ ಹಣ ದೋಚಿರುವುದು ಪೋಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries