ನವದೆಹಲಿ: ಇತ್ತೀಚೆಗೆ ನಡೆದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ದುರ್ಬಳಕೆಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕೇಳಿರುವ ಪ್ರಶ್ನೆಗಳಿಗೆ, ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಭಾನುವಾರ ಒತ್ತಾಯಿಸಿದ್ದಾರೆ.

ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ವೇಳೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ವ್ಯತ್ಯಾಸವಾಗಿದೆ ಎಂದು ಆರೋಪಿಸಿ ಸುಮಾರು 20 ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಲಿಖಿತ ದೂರು ನೀಡಿದ್ದರು.
ಈ ಸಂಬಂಧ ಪ್ರತಿಕ್ರಿಯಿಸಿರುವ ಕಪಿಲ್, ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶದ ಸಂದರ್ಭದಲ್ಲಿ ಇವಿಎಂಗಳ ದುರ್ಬಕೆಯಾಗಿರುವ ಸಂಬಂಧ ಕಾಂಗ್ರೆಸ್ ಪುರಾವೆಗಳನ್ನು ಒದಗಿಸಿದೆ. ಹೀಗಾಗಿ ಚುನಾವಣೆ ಆಯೋಗ ಸ್ಪಷ್ಟನೆ ನೀಡಬೇಕು. ಚುನಾವಣಾ ಸಂದರ್ಭದಲ್ಲಿ ಇವಿಎಂಗಳ ದುರ್ಬಳಕೆ ನಡೆಯುತ್ತವೆ. ಆದರೆ ಎಷ್ಟರ ಮಟ್ಟಿಗೆ ಆಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಕಪಿಲ್ ಅನುಮಾನ ವ್ಯಕ್ತಪಡಿಸಿದ್ದಾರೆ.
ನಾನು ಈ ಹಿಂದೆಯೂ ಹಲವು ಬಾರಿ ಇವಿಎಂಗಳ ದುರ್ಬಳಕೆಯನ್ನು ಖಂಡಿಸಿದ್ದೇನೆ. ಅಪಾರದರ್ಶಕತೆಯಿಂದ ಕೂಡಿದ ಯಾವುದೇ ವಿಷಯವನ್ನು ನಾವು ಒಪ್ಪಿಕೊಳ್ಳಬಾರದು ಎಂದು ಕಪಿಲ್ ಹೇಳಿದ್ದಾರೆ.
ಇವಿಎಂಗಳ ಬ್ಯಾಟರಿ ಶೇಕಡಾವಾರು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಏಕೆಂದರೆ ಬ್ಯಾಟರಿ ಶೇ.80ಕ್ಕಿಂತ ಕಡಿಮೆ ಇರುವ ಹೆಚ್ಚಿನ ಇವಿಎಂ ಯಂತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಹೇಳಿದ್ದಾರೆ.
ಅಕ್ಟೋಬರ್ 5ರಂದು ಹರಿಯಾಣ ವಿಧಾನಸಭೆಗೆ ಮತದಾನ ನಡೆದಿದ್ದು, ಚುನಾವಣೆಯ ಫಲಿತಾಂಶವು ಅಕ್ಟೋಬರ್ 8ಕ್ಕೆ ಹೊರಬೀದ್ದಿದೆ. ಬಿಜೆಪಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಏರಿದೆ.