HEALTH TIPS

ಹೈದರಾಬಾದ್ ಕ್ರಿಕೆಟ್‌ ಸಂಸ್ಥೆಯಲ್ಲಿ ಅವ್ಯವಹಾರ: ED ವಿಚಾರಣೆಗೆ ಅಜರುದ್ದೀನ್ ಗೈರು

         ಹೈದರಾಬಾದ್‌: ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ, ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ಅಜರುದ್ದೀನ್‌ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಗುರುವಾರ ಹಾಜರಾಗಲಿಲ್ಲ.

        ಅಕ್ಟೋಬರ್‌ 3ರಂದು ಹಾಜರಾಗುವಂತೆ ಅಜರುದ್ದೀನ್‌ ಅವರಿಗೆ ಇ.ಡಿ ನೋಟಿಸ್‌ ನೀಡಿತ್ತು. 'ನನಗೆ ತನಿಖೆಗೆ ಹಾಜರಾಗಲು ಇನ್ನಷ್ಟು ಸಮಯ ಬೇಕು' ಎಂದು ಅಜರುದ್ದೀನ್‌ ಅವರು ತನಿಖಾ ಸಂಸ್ಥೆಗೆ ಮನವಿ ಮಾಡಿದರು. ಆದ್ದರಿಂದ ಅಕ್ಟೋಬರ್‌ 8ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ ಅಜರುದ್ದೀನ್‌ ಅವರಿಗೆ ನೋಟಿಸ್‌ ನೀಡಿದೆ.

            ಅಜರುದ್ದೀನ್‌ ಅವರು ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆ ಎನ್ನುವ ಆರೋಪದಲ್ಲಿ, ಕಳೆದ ವರ್ಷದ ನವೆಂಬರ್‌ನಲ್ಲಿ ತನಿಖಾ ಸಂಸ್ಥೆಯು ಕ್ರಿಕೆಟ್‌ ಸಂಸ್ಥೆ ಕಚೇರಿಯ ಮೇಲೆ ದಾಳಿ ನಡೆಸಿತ್ತು.

              ಉಪ್ಪಲ್‌ನಲ್ಲಿರುವ ರಾಜೀವ್‌ ಗಾಂಧಿ ಕ್ರಿಕೆಟ್‌ ಸ್ಟೇಡಿಯಂನ ಕೆನೊ‍‍ಪಿ ನಿರ್ಮಾಣ, ಕ್ರೀಡಾಂಗಣದಲ್ಲಿನ ಅಗ್ನಿಶಾಮಕ ವ್ಯವಸ್ಥೆ ಹಾಗೂ ಡೀಸೆಲ್‌ ಜನರೇಟರ್‌ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಇ.ಡಿ. ಚಾರ್ಚ್‌ಶೀಟ್‌ನಲ್ಲಿ ಹೇಳಿತ್ತು. ವೆಚ್ಚ ಹೆಚ್ಚಿಸುವ ಸಲುವಾಗಿಯೇ ನಿಧಾನಗತಿಯಲ್ಲಿ ನಿರ್ಮಾಣ ಕಾರ್ಯ ನಡೆಸಲಾಗಿದೆ ಎಂದೂ ತನಿಖಾ ಸಂಸ್ಥೆ ಆರೋಪಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries