HEALTH TIPS

Exit Poll Results: ಹರಿಯಾಣದಲ್ಲಿ ಕಾಂಗ್ರೆಸ್‌, J&Kನಲ್ಲಿ ಅತಂತ್ರ ಸಾಧ್ಯತೆ

 ಜಮ್ಮು-ಕಾಶ್ಮೀರ ಮತ್ತು ಹರಿಯಾಣ ವಿಧಾನಸಭೆಗೆ ಮತದಾನ ಇಂದು ಸಂಪನ್ನಗೊಂಡಿದೆ. ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟಗೊಳ್ಳಲಿದ್ದು, ಯಾರಿಗೆ ಬಹುಮತ ಒಲಿಯಲಿದೆ ಎಂದು ಕುತೂಹಲ ಗರಿಗೆದರಿದೆ. ಮತಚಲಾವಣೆಯ ಅವಧಿಯ ಮುಗಿಯುತ್ತದ್ದಂತೆ ವಿವಿಧ ವಿದ್ಯುನ್ಮಾನ ಮಾಧ್ಯಮಗಳು ಸಂಸ್ಥೆಗಳು ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಟಗೊಂಡಿವೆ.

ಎಕ್ಸಿಟ್ ಪೋಲ್ ಭವಿಷ್ಯ ನಿಜವಾಗಲಿದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ನಿಜವಾಗಲಿದೆಯೇ ಮತಗಟ್ಟೆ ಸಮೀಕ್ಷೆ ?

ಈ ಬಾರಿಯ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ. ಮತ್ತೊಂದೆಡೆ ಜಮ್ಮು-ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದ್ದರೂ ಕಾಂಗ್ರೆಸ್‌ ಮೈತ್ರಿಕೂಟ ಮುನ್ನಡೆ ಗಳಿಸಲಿವೆ ಎಂದು ಭವಿಷ್ಯ ನುಡಿದಿವೆ.

ಜಮ್ಮು ಮತ್ತು ಕಾಶ್ಮೀರ ಮತಗಟ್ಟೆ ಸಮೀಕ್ಷೆ: (ಒಟ್ಟು ಸ್ಥಾನ 90, ಮ್ಯಾಜಿಕ್ ಸಂಖ್ಯೆ: 46)

ದೈನಿಕ್ ಬಾಸ್ಕರ್ ಮತಗಟ್ಟೆ ಸಮೀಕ್ಷೆ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ 35ರಿಂದ 40 ಸ್ಥಾನಗಳು ಸಿಗಲಿವೆ. ಬಿಜೆಪಿ 20ರಿಂದ 25 ಸ್ಥಾನಗಳನ್ನು ಗಳಿಸಲಿವೆ.

ಪೀಪಲ್ಸ್ ಪಲ್ಸ್ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಸರಳ ಬಹುಮತ ಪಡೆಯಲಿದ್ದು, 46ರಿಂದ 50 ಸ್ಥಾನಗಳನ್ನು ಗಳಿಸಲಿದೆ. ಬಿಜೆಪಿ 23ರಿಂದ 27 ಸ್ಥಾನಗಳು ಪಡೆಯಲಿವೆ ಎಂದು ಅಂದಾಜಿಸಲಾಗಿದೆ.

ಇಂಡಿಯಾ ಟುಡೇ ಸಿ-ವೋಟರ್ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ ಸರಳ ಬಹುಮತ ಸಿಗಲಿದೆ. ಕಾಂಗ್ರೆಸ್ 40ರಿಂದ 48 ಮತ್ತು ಬಿಜೆಪಿ 27ರಿಂದ 32 ಸ್ಥಾನಗಳನ್ನು ಗಳಿಸಲಿವೆ.

ದೈನಿಕ್ ಬಾಸ್ಕರ್ ಮತಗಟ್ಟೆ ಸಮೀಕ್ಷೆ:

ಕಾಂಗ್ರೆಸ್+ಎನ್‌ಸಿ: 35-40

ಬಿಜೆಪಿ: 20-25

ಪಿಡಿಪಿ: 4-7

ಇತರೆ: 12-18

ಪೀಪಲ್ಸ್ ಪಲ್ಸ್ ಮತಗಟ್ಟೆ ಸಮೀಕ್ಷೆ:

ಕಾಂಗ್ರೆಸ್+ಎನ್‌ಸಿ: 46-50

ಬಿಜೆಪಿ: 23-27

ಪಿಡಿಪಿ: 7-11

ಇತರೆ: 4-6

ಇಂಡಿಯಾ ಟುಡೇ ಸಿ-ವೋಟರ್ ಮತಗಟ್ಟೆ ಸಮೀಕ್ಷೆ:

ಕಾಂಗ್ರೆಸ್+ಎನ್‌ಸಿ: 40-48

ಬಿಜೆಪಿ: 27-32

ಪಿಡಿಪಿ: 6-12

ಇತರೆ: 6-11

ಹರಿಯಾಣ ಮತಗಟ್ಟೆ ಸಮೀಕ್ಷೆ: (ಒಟ್ಟು ಸ್ಥಾನ 90, ಮ್ಯಾಜಿಕ್ ಸಂಖ್ಯೆ: 46)

ದೈನಿಕ್ ಬಾಸ್ಕರ್ ಮತಗಟ್ಟೆ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 44ರಿಂದ 54 ಸ್ಥಾನಗಳನ್ನುಗಳಿಸಲಿವೆ. ಪೀಪಲ್ಸ್ ಪಲ್ಸ್ ಚುನಾವಣೋತ್ತರ ಸಮೀಕ್ಷೆ ಕೂಡಾ ಕಾಂಗ್ರೆಸ್ ಅಧಿಕಾರ ಬರುವುದಾಗಿ ಅಂದಾಜಿಸಿದೆ. ಪೀಪಲ್ಸ್ ಪಲ್ಸ್ ಪ್ರಕಾರ ಕಾಂಗ್ರೆಸ್‌ಗೆ 49ರಿಂದ 61 ಸ್ಥಾನಗಳು ಸಿಗಲಿವೆ.

ರಿಪಬ್ಲಿಕ್ ಭಾರತ್-ಮ್ಯಾಟ್ರಿಝ್ ಮತಗಟ್ಟೆ ಸಮೀಕ್ಷೆ ಪ್ರಕಾರ ಹರಿಯಾಣದಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಗಳಿಸಲಿದೆ. ದೇಶದ ಹಳೆಯ ಪಕ್ಷ 55ರಿಂದ 62 ಸ್ಥಾನಗಳನ್ನು ಮತ್ತು ಬಿಜೆಪಿ 18ರಿಂದ 24 ಸ್ಥಾನಗಳನ್ನು ಗಳಿಸಲಿವೆ.

ದೈನಿಕ್ ಬಾಸ್ಕರ್ ಮತಗಟ್ಟೆ ಸಮೀಕ್ಷೆ:

ಕಾಂಗ್ರೆಸ್+: 44-54

ಬಿಜೆಪಿ: 19-29

ಜೆಜೆಪಿ+: 0-1

ಐಎನ್‌ಎಲ್‌ಡಿ+: 1-5

ಎಎಪಿ: 0-1

ಇತರೆ: 4-9

ಧ್ರುವ್ ರಿಸರ್ಚ್ ಮತಗಟ್ಟೆ ಸಮೀಕ್ಷೆ:

ಕಾಂಗ್ರೆಸ್+: 50-64

ಬಿಜೆಪಿ: 22-32

ಜೆಜೆಪಿ+: 0

ಐಎನ್‌ಎಲ್‌ಡಿ+: 0

ಎಎಪಿ: 0

ಇತರೆ: 2-8

ಪೀಪಲ್ಸ್ ಪಲ್ಸ್ ಮತಗಟ್ಟೆ ಸಮೀಕ್ಷೆ:

ಕಾಂಗ್ರೆಸ್+: 49-61

ಬಿಜೆಪಿ: 20-32

ಜೆಜೆಪಿ+: 0-1

ಐಎನ್‌ಎಲ್‌ಡಿ+: 2-3

ಎಎಪಿ: 0

ಇತರೆ: 3-5

ರಿಪಬ್ಲಿಕ್ ಭಾರತ್-ಮ್ಯಾಟ್ರಿಝ್ ಮತಗಟ್ಟೆ ಸಮೀಕ್ಷೆ:

ಕಾಂಗ್ರೆಸ್+: 55-62

ಬಿಜೆಪಿ: 18-24

ಜೆಜೆಪಿ+: 0-3

ಐಎನ್‌ಎಲ್‌ಡಿ+: 3-6

ಇತರೆ: 2-5

ಹರಿಯಾಣದಲ್ಲಿ 10 ವರ್ಷದ ಬಳಿಕ ಕಾಂಗ್ರೆಸ್‌ ಅಧಿಕಾರಕ್ಕೆ?

ಹರಿಯಾಣ ವಿಧಾನಸಭೆಗೆ ಇಂದು (ಅಕ್ಟೋಬರ್ 5ರಂದು) ಏಕಕಾಲದಲ್ಲಿ ಮತದಾನ ನಡೆದಿದೆ. ರಾಜ್ಯದಲ್ಲಿ ಬಿಜೆಪಿಯು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿದೆಯೇ ಅಥವಾ 10 ವರ್ಷದ ಅಂತರದ ಬಳಿಕ ಕಾಂಗ್ರೆಸ್‌ ಪಕ್ಷವು ಸರ್ಕಾರ ರಚಿಸಲಿದೆಯೇ ಎಂಬುದು ನಿರ್ಧಾರವಾಗಲಿದೆ.

ರಾಜ್ಯದಲ್ಲಿ 1,031 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 930 ಮಂದಿ ಪುರುಷರು ಮತ್ತು 101 ಮಂದಿ ಮಹಿಳೆಯರು. 90 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸುವುದಾಗಿ ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ವಿಶ್ವಾಸ ವ್ಯಕ್ತಪಡಿಸಿವೆ.

ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ ಇದೆ. ಇತರ ಪಕ್ಷಗಳಾದ ಎಎಪಿ ಮತ್ತು ಐಎನ್‌ಎಲ್‌ಡಿ-ಬಿಎಸ್‌ಪಿ ಹಾಗೂ ಜೆಜೆಪಿ-ಎಎಸ್‌ಪಿ ಸುಮಾರು 20 ಕ್ಷೇತ್ರಗಳ ಫಲಿತಾಂಶವನ್ನು ನಿರ್ಧರಿಸುವ ಸಾಧ್ಯತೆ ಇದೆ. ಇದು ಫಲಿತಾಂಶದ ಮೇಲೆ ನಿರ್ಣಾಯಕ ಪರಿಣಾಮ ಬೀರಲಿದೆ.

2019ರ ಚುನಾವಣೆಯಲ್ಲಿ ಬಿಜೆಪಿ 40 ಕ್ಷೇತ್ರಗಳಲ್ಲಿ ಗೆದ್ದು, ಜೆಜೆಪಿ ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಈ ಬಾರಿ ಲೋಕಸಭಾ ಚುನಾವಣೆಗೂ ಮೊದಲೇ ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಮುರಿದಿದೆ.

ಕುತೂಹಲ ಕೆರಳಿಸಿದ ಜಮ್ಮು-ಕಾಶ್ಮೀರ...

ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲ ಮೂರು ಹಂತಗಳಲ್ಲಿ ಶೇ 63.45ರಷ್ಟು ಮತದಾನವಾಗಿದೆ.

ಸೆಪ್ಟೆಂಬರ್ 18ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ 61.38 ಮತ್ತು ಸೆಪ್ಟೆಂಬರ್ 25ರಂದು ಎರಡನೇ ಹಂತದಲ್ಲಿ ಶೇ 57.31ರಷ್ಟು ಮತದಾನವಾಗಿತ್ತು. ಅಕ್ಟೋಬರ್ 1ರಂದು ಕೊನೆಯ ಹಂತದ ಮತದಾನ ನಡೆದಿತ್ತು.

90 ಸದಸ್ಯ ಬಲದ ಜಮ್ಮು ವಿಧಾನಸಭೆ ಚುನಾವಣೆಯ ಫಲಿತಾಂಶ ಅಕ್ಟೋಬರ್ 8ರಂದು ಹೊರಬೀಳಲಿದೆ.

ಸಂವಿಧಾನದ 370ನೇ ವಿಧಿಯಡಿಯಲ್ಲಿ ನೀಡಲಾಗಿದ್ದು ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ನಡೆಯುತ್ತಿರುವ ಈ ಚುನಾವಣೆಯು ಹೆಚ್ಚಿನ ಮಹತ್ವ ಪಡೆದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries