HEALTH TIPS

Haryana assembly Polls| ಕಾಂಗ್ರೆಸ್‌ ನಾಯಕರ ಸಭೆ: ಸೋಲಿನ ಕಾರಣ ಪತ್ತೆಗೆ ಸಮಿತಿ

 ವದೆಹಲಿ: 'ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ನಾಯಕರು ಪಕ್ಷದ ಹಿತಾಸಕ್ತಿ ಮೀರಿ ಸ್ವಹಿತಾಸಕ್ತಿಗೆ ಆದ್ಯತೆ ನೀಡಿದ್ದು, ಸೋಲಿಗೆ ಕಾರಣವಾಯಿತು' ಎಂದು ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಗುರುವಾರ ನಡೆದ ಉನ್ನತ ನಾಯಕರ ಸಭೆಯಲ್ಲಿ ಮಾತನಾಡಿದ ರಾಹುಲ್‌ ಈ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹರಿಯಾಣದಲ್ಲಿ ಪಕ್ಷದ ಸೋಲಿಗೆ ಕಾರಣಗಳನ್ನು ತಿಳಿಯಲು ಸತ್ಯಶೋಧನಾ ಸಮಿತಿಯನ್ನು ರಚಿಸಲು ಉನ್ನತ ನಾಯಕರ ಸಭೆಯು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಹರಿಯಾಣದಲ್ಲಿ ಪಕ್ಷದ ವೀಕ್ಷಕರಾಗಿದ್ದ ಅಶೋಕ್ ಗೆಹಲೋತ್, ಅಜಯ್‌ ಮಾಕನ್, ಪಕ್ಷದ ಸೋಲಿಗೆ ತಮ್ಮ ಪ್ರಾಥಮಿಕ ವಿಶ್ಲೇಷಣೆ, ನೀಡಿದ್ದಾರೆ. ಫಲಿತಾಂಶ ಅನಿರೀಕ್ಷಿತ ಎಂದು ಪ್ರತಿಕ್ರಿಯಿಸಿದ್ದ ಪಕ್ಷ ಈಗ ಅದರ ವಿಶ್ಲೇಷಣೆಯನ್ನು ನಡೆಸುತ್ತಿದೆ.
ಇವಿಎಂ ದೋಷ ಕುರಿತ ದೂರುಗಳ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಲಾಗಿದೆ. ಸತ್ಯಶೋಧನಾ ಸಮಿತಿಯು ಈ ಬಗ್ಗೆ ಅಭ್ಯರ್ಥಿಗಳ ಜೊತೆ ಚರ್ಚಿಸಲಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಭಾಗವಹಿಸಿದ್ದರು. ಹರಿಯಾಣದ ಪಕ್ಷದ ಮುಖಂಡರಾದ ಭೂಪಿಂದರ್ ಹೂಡಾ, ಕುಮಾರಿ ಸೆಲ್ಜಾ, ರಣದೀಪ್‌ ಸಿಂಗ್‌ ಸುರ್ಜೇವಾಲಾ, ಅಜಯ್‌ ಯಾದವ್, ಉದಯ್‌ ಭಾನ್ ಪಾಲ್ಗೊಂಡಿರಲಿಲ್ಲ. ಈ ಮುಖಂಡರ ಜೊತೆಗೆ ಮತ್ತೊಂದು ಸುತ್ತಿನಲ್ಲಿ ಸಭೆ ನಡೆಸುವ ಸಾಧ್ಯತೆಗಳಿವೆ.

'ಪಕ್ಷದ ಹಿತಾಸಕ್ತಿಗಿಂತಲೂ ಮುಖಂಡರ ಸ್ವಹಿತಾಸಕ್ತಿಯೇ ಮೇಲುಗೈ ಸಾಧಿಸಿದೆ. ಇದನ್ನು ಹೊರತುಪಡಿಸಿ ಮತ್ತೇನೂ ಹೇಳಲು ಬಯಸುವುದಿಲ್ಲ' ಎಂದು ರಾಹುಲ್‌ಗಾಂಧಿ ಅವರು ಸ್ಪಷ್ಟವಾಗಿ ಹೇಳಿದರು. ಪಕ್ಷದ ಪ್ರಚಾರ ವೈಖರಿ ಬಗ್ಗೆಯೂ ರಾಹುಲ್‌ಗಾಂಧಿ ಬೇಸರ ವ್ಯಕ್ತಪಡಿಸಿದರು. ಸೆ.18ರಂದು ಏಳು ಗ್ಯಾರಂಟಿ ಘೋಷಿಸಿದಾಗ ರಾಹುಲ್‌ ಹಾಜರಿರಲಿಲ್ಲ. ಪಕ್ಷದಲ್ಲಿ ಚರ್ಚಿಸದೇ ಮುಖಂಡರು ತಮಗನಿಸಿದಂತೆ ಗ್ಯಾರಂಟಿ ಪ್ರಕಟಿಸಿದರು ಎಂದರು' ಎಂಬುದಾಗಿ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತಂತೆ ಕುಮಾರಿ ಸೆಲ್ಜಾ, ರಣದೀಪ್‌ ಸಿಂಗ್‌ ಸುರ್ಜೇವಾಲಾ ಮತ್ತು ಅಜಯ್ ಯಾದವ್ ಅವರಿಂದ ದೂರು ಬಂದ ಬಳಿಕ ಕೇಂದ್ರ ಚುನಾವಣೆ ಸಮಿತಿಯಲ್ಲಿ ಚರ್ಚಿಸಲು ಬಯಸಿದ್ದರು.

ಸಭೆಯ ನಂತರ ಮಾತನಾಡಿದ ಗೆಹಲೋತ್ ಅವರು, ಹರಿಯಾಣದಲ್ಲಿ ಪಕ್ಷದ ಸೋಲನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಾರಣಗಳ ಆಳ ತಿಳಿಯಲು ಒತ್ತುನೀಡುತ್ತೇವೆ. ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್‌ ಜಯಗಳಿಸಲಿದೆ ಎಂದು ಹೇಳಿದ್ದವು ಎಂದರು. ಇ.ವಿ.ಎಂ ವಿರುದ್ಧದ ಆರೋಪ ಸೇರಿ ಅನೇಕ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದರು.

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸತತ ಮೂರನೇ ಬಾರಿಗೆ ಸೋಲು ಕಂಡಿದೆ.

'ಊಹಾತ್ಮಕ ವರದಿ ಬೇಡ'

ನವದೆಹಲಿ: 'ಪಕ್ಷದಿಂದ ಅಧಿಕೃತವಾಗಿ ತಿಳಿಸುವ ಮಾಹಿತಿ ಹೊರತುಪಡಿಸಿ, ವದಂತಿಗಳಿಗೆ ಆಸ್ಪದವಾಗುವ ಊಹಾತ್ಮಕ ಮಾಹಿತಿಗಳಿಂದ ದೂರ ಇರಬೇಕು' ಎಂದು ಕಾಂಗ್ರೆಸ್ ಪಕ್ಷ ಮಾಧ್ಯಮಗಳಿಗೆ ಮನವಿ ಮಾಡಿದೆ.

ಕಾಂಗ್ರೆಸ್ ಪಕ್ಷದ ಉನ್ನತ ಮುಖಂಡರ ಸಭೆ ಕುರಿತ ವರದಿ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯು ಈ ಹೇಳಿಕೆಯನ್ನು ನೀಡಿದೆ.

ಅನೇಕ ಆಧಾರವಿಲ್ಲದ ಮೂಲಗಳನ್ನು ಆಧರಿಸಿ ಸುದ್ದಿಗಳು ಮಾಧ್ಯಮ
ಗಳಲ್ಲಿ ಬಿತ್ತರವಾಗುತ್ತಿವೆ ಎಂದು ಹೇಳಿಕೆಯಲ್ಲಿ ಪಕ್ಷ ಅಭಿಪ್ರಾಯಪಟ್ಟಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries