ನವದೆಹಲಿ: ಭಾರತೀಯ ರೈಲ್ವೇ ಆಹಾರದಲ್ಲಿ 'ಜರಿ ಹುಳು' ಪತ್ತೆಯಾಗಿದ್ದು, ಈ ಕುರಿತ ಫೋಟೋ ವ್ಯಾಪಕ ವೈರಲ್ ಆಗುತ್ತಿದೆ.
ದೆಹಲಿ ಮೂಲದ ಆರೇನ್ಶ್ ಸಿಂಗ್ ಎಂಬುವವರು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ದೆಹಲಿಯ ವಿಐಪಿ ಎಕ್ಸಿಕ್ಯುಟಿವ್ ಲಾಂಜ್‌ನಲ್ಲಿ ತಾವು ತೆಗೆದುಕೊಂಡಿದ್ದ ಆಹಾರದಲ್ಲಿ 'ಜರಿ ಹುಳು' ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ ಭಾರತೀಯ ರೈಲ್ವೇ ಆಹಾರದ ಗುಣಮಟ್ಟ ಸುಧಾರಿಸಿದ್ದು, ಈಗ ಅವರು ಹೆಚ್ಚು ಪ್ರೋಟೀನ್‌ನೊಂದಿಗೆ ರಾಯ್ತಾವನ್ನು ನೀಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಅಲ್ಲದೆ ಆರೇನ್ಶ್ ಸಿಂಗ್ ವಿಐಪಿ ಎಕ್ಸಿಕ್ಯುಟಿವ್ ಲಾಂಜ್ ನಲ್ಲೇ ಇಂತಹುದು ಸಂಭವಿಸಿದರೆ ಇನ್ನು ನೀವು ಸಾಮಾನ್ಯ ರೈಲುಗಳಲ್ಲಿ ನೀಡುವ ಆಹಾರದ ಗುಣಮಟ್ಟದ ಕುರಿತು ಕಲ್ಪನೆ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ಅಲ್ಲದೆ ಅವರು ಕಲುಷಿತ ಆಹಾರದ ಬಗ್ಗೆ ಸಹ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದು, ರೈಲ್ವೇ ಆಹಾರ ಸುರಕ್ಷತೆಯ ಬಗ್ಗೆ ಕಳವಳಕಾರಿ ಕೊರತೆ ಇದೆ ಎಂದು ಹೇಳಿದ್ದಾರೆ.