ಜೆರುಸಲೇಂ: ಸುಮಾರು ಮೂರು ತಿಂಗಳ ಹಿಂದೆಯೇ ಗಾಜಾದಲ್ಲಿ (Gaza) ನಡೆಸಲಾದ ವೈಮಾನಿಕ ದಾಳಿಯಲ್ಲಿ ಹಿರಿಯ ಹಮಾಸ್ ನಾಯಕನನ್ನು ಹತ್ಯೆ ಮಾಡಿರುವುದಾಗಿ ಇದೀಗ ಇಸ್ರೇಲಿ (Israeli Airstrike) ಮಿಲಿಟರಿ ಪಡೆ ಟ್ವೀಟ್ (ಈ ಹಿಂದಿನ ಟ್ವಿಟರ್) ಮುಖೇನ ಸ್ಪಷ್ಟಪಡಿಸಿದೆ.

ಟ್ವೀಟ್ ಪ್ರಕಾರ, ಉತ್ತರ ಗಾಜಾದಲ್ಲಿ ಕಾಂಪೌಂಡ್‌ನಲ್ಲಿ ಅಡಗಿ ಕುಳಿತಿದ್ದ ರಾವಿ ಮುಶ್ತಾಹಾ ಮತ್ತು ಇತರ ಇಬ್ಬರು ಹಮಾಸ್ ಕಮಾಂಡರ್‌ಗಳಾದ ಸಮೇಹ್ ಸಿರಾಜ್ ಮತ್ತು ಸಮೇಹ್ ಔದೆ ಅವರನ್ನು ದಾಳಿಯ ವೇಳೆ ಹೊಡೆದುರಳಿಸಲಾಯಿತು ಎಂದು ಫೋಟೋ ಸಮೇತ ತಿಳಿಸಿದೆ. ಆದ್ರೆ, ಈ ಕುರಿತು ಹಮಾಸ್‌ನಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದೇ ಆಶ್ಚರ್ಯ.
ಮೂವರು ಕಮಾಂಡರ್‌ಗಳು ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಉತ್ತರ ಗಾಜಾದಲ್ಲಿ ಕೋಟೆಯ ಕಾಂಪೌಂಡ್‌ನಲ್ಲಿ ಆಶ್ರಯ ಪಡೆದಿದ್ದರು ಎಂದು ಮಿಲಿಟರಿ ಪಡೆ ಉಲ್ಲೇಖಿಸಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲಿನ ಮಾಸ್ಟರ್‌ಮೈಂಡ್ ದಾಳಿಗೆ ಸಹಾಯ ಮಾಡಿದ ಹಮಾಸ್‌ನ ಉನ್ನತ ನಾಯಕ ಯಾಹ್ಯಾ ಸಿನ್ವಾರ್ ಅವರ ನಿಕಟ ಸಹವರ್ತಿ ಮುಶ್ತಾಹ ಈ ಯುದ್ಧ ಸ್ಫೋಟಗೊಳ್ಳಲು ಕಾರಣ. ಸದ್ಯ ಸಿನ್ವಾರ್ ಇನ್ನೂ ಜೀವಂತವಾಗಿದ್ದಾನೆ ಎನ್ನಲಾಗಿದ್ದು, ಗಾಜಾದಲ್ಲಿ ಅವಿತುಕೊಂಡಿದ್ದಾನೆ ಎಂದೇ ನಂಬಲಾಗಿದೆ.