HEALTH TIPS

J&K : ಟ್ರಾಫಿಕ್‌ನಲ್ಲಿ ಗ್ರೀನ್ ಕಾರಿಡಾರ್ ಬೇಡ ಎಂದು ಡಿಜಿಗೆ ತಿಳಿಸಿದ CM ಒಮರ್

          ಶ್ರೀನಗರ: ಸಾರ್ವಜನಿಕರಿಗೆ ಅನಗತ್ಯ ಕಿರಿಕಿರಿ ಉಂಟಾಗದಂತೆ ಟ್ರಾಫಿಕ್‌ನಲ್ಲಿ ಮುಖ್ಯಮಂತ್ರಿಗೆ ನೀಡುವ ಗ್ರೀನ್ ಕಾರಿಡಾರ್‌ ಸೌಕರ್ಯವನ್ನು ತೆಗೆದುಹಾಕುವಂತೆ ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಿದ್ದಾರೆ.

        ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ ಅವರು, ತಾವು ರಸ್ತೆ ಮೂಲಕ ಸಂಚರಿಸುವಾಗ ಮುಕ್ತ ಸಂಚಾರಕ್ಕೆ ನೀಡಲಾಗುವ ಗ್ರೀನ್ ಕಾರಿಡಾರ್‌ ಸೌಕರ್ಯದಿಂದ ಸಾರ್ವಜನಿಕರಿಗೆ ಅನಗತ್ಯ ಸಮಸ್ಯೆ ಉಂಟಾಗುತ್ತದೆ. ಇದನ್ನು ರದ್ದುಪಡಿಸುವುದರ ಜತೆಗೆ ಸೈರನ್‌ ಬಳಕೆಯನ್ನೂ ಗಣನೀಯವಾಗಿ ತಗ್ಗಿಸುವಂತೆಯೂ ತಿಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹೇಳಿದ್ದಾರೆ.


           'ಬೆಂಗಾವಲು ಪಡೆಯ ವಾಹನದಿಂದ ಲಾಠಿ ಹೊರಕ್ಕೆ ಚಾಚುವುದು ಅಥವಾ ಆಕ್ರಮಣಕಾರಿ ಸನ್ಹೆಗಳನ್ನು ಮಾಡಬಾರದು ಎಂದು ಸೂಚಿಸಿದ್ದರು. ಇದನ್ನೇ ನಮ್ಮ ಸಂಪುಟ ಸಹೋದ್ಯೋಗಿಗಳೂ ಪಾಲಿಸುವ ಮೂಲಕ ಮಾದರಿಯಾಗಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ. ನಮ್ಮ ಎಲ್ಲಾ ವರ್ತನೆಗಳೂ ನಾಗರಿಕ ಸ್ನೇಹಿಯಾಗಿರಬೇಕು. ನಾವು ಇಲ್ಲಿರುವುದು ಜನರ ಸೇವೆ ಮಾಡಲೇ ಹೊರತು, ಅವರಿಗೆ ಅನಾನುಕೂಲತೆ ಸೃಷ್ಟಿಸಲು ಅಲ್ಲ' ಎಂದು ಮುಖ್ಯಮಂತ್ರಿ ಒಮರ್ ಹೇಳಿದ್ದಾರೆ.

ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ರದ್ದುಪಡಿಸಿದ ನಂತರ ರಚನೆಯಾದ ಸರ್ಕಾರದ ಮುಖ್ಯಮಂತ್ರಿಯಾಗಿ ಒಮರ್ ಅಧಿಕಾರ ವಹಿಸಿಕೊಂಡಿದ್ದಾರೆ.

             2009ರಿಂದ 2014ರವರೆಗೂ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಬೆಂಗಾವಲು ವಾಹನಗಳು ಸಂಚಾರ ನಿಯಮಗಳನ್ನು ಸಾರ್ವಜನಿಕರಂತೆಯೇ ಪಾಲಿಸುವಂತೆ ನಿರ್ದೇಶಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries