ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಯಾವೆಲ್ಲಾ ಪ್ರಮುಖ ನಾಯಕರು ಗೆಲುವು ಸಾಧಿಸಿದ್ದಾರೆ ಮತ್ತು ಯಾರೆಲ್ಲಾ ಸೋತಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.
ಬುಡಗಾಮ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಭ್ಯರ್ಥಿ ಒಮರ್ ಅಬ್ದುಲ್ಲಾ ಗೆಲುವು ಸಾಧಿಸಿದ್ದಾರೆ.
ಪಿಡಿಪಿ ಅಭ್ಯರ್ಥಿ ಆಗಾ ಸೈಯದ್ ಮುಂತಾಜಿರ್ ಮೆಹ್ದಿ ವಿರುದ್ಧ 18 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಒಮರ್ 36,010 ಮತಗಳನ್ನು ಗಳಿಸಿದ್ದರೆ, ಮೆಹ್ದಿ 17,525 ಮತ ಗಳಿಸಿದ್ದಾರೆ. ಕ್ಷಿತ್ವಾರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಶಾಗುನ್ ಪರಿಹಾರ್ 500 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಉದಮ್‌ಪುರ ಪೂರ್ವ ಕ್ಷೇತ್ರದಲ್ಲಿ ಬಿಜೆಪಿಯ ರಣಬೀರ್ ಸಿಂಗ್ ಪಠಾನಿಯಾ ಗೆಲವು ಸಾಧಿಸಿದ್ದಾರೆ.
ಗುರೇಜ್ ವಿಧಾನಸಭಾ ಕ್ಷೇತ್ರದಲ್ಲಿ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ನಜೀರ್ ಅಹಮದ್ ಖಾನ್ ನಾಲ್ಕನೆ ಬಾರಿಗೆ ಗೆದ್ದಿದ್ದಾರೆ. ಬಿಜೆಪಿಯ ಫಕೀರ್ ಮೊಹಮ್ಮದ್ ಖಾನ್ ವಿರುದ್ಧ 1,132 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.
ದೋಡಾ ಕ್ಷೇತ್ರದಲ್ಲಿ ಎಎಪಿ ಪಕ್ಷದ ಅಭ್ಯರ್ಥಿ ಮೆಹರಾಜ್ ಮಲ್ಲಿಕ್ ಜಯ ಸಾಧಿಸಿದ್ದಾರೆ. ಬಿಜೆಪಿಯ ಗಜಯ್ ಸಿಂಗ್ ರಾಣಾ ವಿರುದ್ಧ 4,538 ಮತಗಳ ಅಂತರದಲ್ಲಿ ಮೆಹರಾಜ್ ಗೆದ್ದಿದ್ದಾರೆ.
ಗಂಡೇರ್‌ಬಲ್ ಕ್ಷೇತ್ರದಲ್ಲೂ ಒಮರ್ ಅಬ್ದಲ್ಲಾ ಗೆದ್ದು ಬೀಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನೌಶೇರಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ರವೀಂದರ್ ರೈನಾ ಸೋಲು ಕಂಡಿದ್ದು, ನ್ಯಾಷನಲ್ ಕಾನ್ಫರೆನ್ಸ್‌ನ ಸುರಿಂದರ್ ಚೌಧರಿ 7,819 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.