HEALTH TIPS

Mobile ಚಾರ್ಜ್‌ ಮಾಡುವಾಗ ಈ ತಪ್ಪು ಮಾಡದೇ ಇದ್ರೇ, ನಿಮ್ಮ ಮೊಬೈಲ್‌ ಸೇಫ್!

 ಸದ್ಯ ಮೊಬೈಲ್‌ ಎಲ್ಲರಿಗೂ ಅವಶ್ಯಕ ಹಾಗೂ ಅಗತ್ಯ ಸಾಧನ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂದಿನ ಬಹುತೇಕ ಎಲ್ಲ ಕೆಲಸಗಳು ಮೊಬೈಲ್‌ ಮೇಲೆ ಅವಲಂಬಿತವಾಗಿದೆ ಎನ್ನಬಹುದು. ಹೀಗಾಗಿ ಬಳಕೆದಾರರು ಮೊಬೈಲ್‌ ಬ್ಯಾಟರಿ ದೀರ್ಘ ಬ್ಯಾಕ್‌ಅಪ್‌ ಬರಲಿ ಎಂದು ಬಯಸುತ್ತಾರೆ. ಅದಾಗ್ಯೂ, ಅನೇಕರು ಮೊಬೈಲ್‌ ಬ್ಯಾಟರಿ ಬ್ಯಾಕ್‌ಅಪ್‌ ಸರಿಯಾಗಿ ಬರ್ತಿಲ್ಲಾ ಎನ್ನುವುದನ್ನು ಕೇಳಿದ್ದೇವೆ. ಮೊಬೈಲ್‌ ಅನ್ನು ಸರಿಯಾದ ಕ್ರಮದಲ್ಲಿ ಚಾರ್ಜ್‌ ಮಾಡಿದಿದ್ದರೆ, ಫೋನ್ ಬ್ಯಾಟರಿಗೆ ಧಕ್ಕೆ ಖಚಿತ.

ಹೌದು, ಇಂದಿನ ಬಹುತೇಕ ಮೊಬೈಲ್‌ಗಳ ಒಂದು ದಿನ ಬ್ಯಾಕ್‌ಅಪ್‌ ಒದಗಿಸುತ್ತವೆ. ಆದರೂ ಕೆಲವರ ಮೊಬೈಲ್‌ ಬ್ಯಾಟರಿ ಬೇಗನೆ ಖಾಲಿಯಾಗುತ್ತವೆ. ಅದಕ್ಕೆ ಅವರ ಬಳಕೆಯು ಕಾರಣವಾಗಿರಬಹುದು ಅಥವಾ ಸರಿಯಾದ ಕ್ರಮದಲ್ಲಿ ಮೊಬೈಲ್‌ ಚಾರ್ಜ್‌ ಮಾಡದೇ ಇರುವುದು ಕೂಡಾ ಆಗಿರಬಹುದು. ಹಾಗಾದರೇ ಮೊಬೈಲ್‌ ಬ್ಯಾಟರಿ ಬ್ಯಾಕ್‌ಅಪ್‌ ಉತ್ತಮ ಸ್ಥಿತಿಯಲ್ಲಿ ಉಳಿಸಿಕೊಳ್ಳಲು ಚಾರ್ಜಿಂಗ್ ವೇಳೆ ಯಾವ ಕ್ರಮ ಅನುಸರಿಸಬೇಕು ಎಂಬುವ ಕೆಲವು ಯುಪಯುಕ್ತ ಟಿಪ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಅಧಿಕೃತ ಚಾರ್ಜರ್ ಬಳಸಿ

ನಿಮ್ಮ ಮೊಬೈಲ್‌ಗೆ ಸಂಸ್ಥೆಯು ನೀಡಿರುವ ಅಧಿಕೃತ ಚಾರ್ಜರ್‌ ಅನ್ನು ಬಳಸಿ ಚಾರ್ಜ್ ಮಾಡಿರಿ. ಇತರೆ ಥರ್ಡ್‌ಪಾರ್ಟಿ ಮೊಬೈಲ್‌ ಚಾರ್ಜರ್ ಅಥವಾ ಬೇರೆ ಸಂಸ್ಥೆಗಳ ಚಾರ್ಜರ್‌ಗಳನ್ನು ಬಳಸಲೇಬೇಡಿ. ಮುಖ್ಯವಾಗಿ ಕಡಿಮೆ ದರದಲ್ಲಿ ಸೀಗುವ ಮೊಬೈಲ್‌ ಚಾರ್ಜರ್‌ಗಳನ್ನು ಬಳಸುವ ಮುನ್ನ ಎರಡು ಬಾರಿ ಯೋಚಿಸುವುದು ಉತ್ತಮ. ಇಂತಹ ತಪ್ಪುಗಳು ನಿಮ್ಮ ಮೊಬೈಲ್‌ ಬ್ಯಾಟರಿ (Battery) ಬಾಳಿಕೆಯನ್ನು ಹಾಳುಮಾಡುವ ಸಾಧ್ಯತೆಗಳಿರುತ್ತವೆ.

ಚಾರ್ಜಿಂಗ್ ವೇಳೆ ಮೊಬೈಲ್‌ ಬಳಸಬೇಡಿ

ಸಾಮಾನ್ಯವಾಗಿ ಅನೇಕರು ಮೊಬೈಲ್‌ ಚಾರ್ಜ್ ಮಾಡುವಾಗ ಅದನ್ನು ಬಳಕೆ ಮಾಡುತ್ತಾರೆ. ಹೀಗೆ ಚಾರ್ಜಿಂಗ್ ವೇಳೆ ಮೊಬೈಲ್‌ ಬಳಕೆ ಮಾಡುವುದು ಬ್ಯಾಟರಿ ಬ್ಯಾಕ್‌ಅಪ್‌ಗೂ ಧಕ್ಕೆ ಆಗುವ ಸಾಧ್ಯತೆಗಳಿರುತ್ತವೆ. ಅಲ್ಲದೇ ಅಪಾಯದ ಸಾಧ್ಯತೆಗಳು ಸಂಭವಿಸಬಹುದು. ಹೀಗಾಗಿ ಚಾರ್ಜಿಂಗ್ ವೇಳೆ ಸಾಧ್ಯವಾದಷ್ಟು ಸ್ಮಾರ್ಟ್‌ಫೋನ್ ಬಳಕೆ ಮಾಡದೇ ಇರುವುದು ಬಹಳ ಮುಖ್ಯ.

ಮೇಲಿಂದ ಮೇಲೆ ಚಾರ್ಜ್ ಹಾಕಬೇಡಿ

ನಿಮ್ಮ ಮೊಬೈಲ್‌ ಅನ್ನು ಪದೇ ಪದೇ ಚಾರ್ಜ್ ಹಾಕುವುದು ಸಹ ಸರಿಯಾದ ಕ್ರಮವಲ್ಲ. ಇದರಿಂದ ಮೊಬೈಲ್‌ ಬ್ಯಾಟರಿ ಹಾಳಾಗುವ ಸಾಧ್ಯತೆಗಳು ಹೆಚ್ಚು. ಮೊಬೈಲ್‌ ಚಾರ್ಜಿಂಗ್ ಅಗತ್ಯ ಎನಿಸಿದರೆ ಮಾತ್ರ ಚಾರ್ಜ್ ಮಾಡಿರಿ. ಸಾಧ್ಯವಾದಷ್ಟು ಮೊಬೈಲ್‌ ಬ್ಯಾಟರಿಯನ್ನು 60% ನಿಂದ 75% ಪರ್ಸೆಂಟ್ ನಡುವೆ ಇರುವಂತೆ ನೋಡಿಕೊಳ್ಳಿ, ಅದಾಗ್ಯೂ ಚಾರ್ಜ್ ಅನಿವಾರ್ಯ ಎಂದಾಗ ಚಾರ್ಜ್ ಮಾಡಬಹುದು.

ಮೊಬೈಲ್‌ ಬ್ಯಾಟರಿ ಪೂರ್ಣ ಖಾಲಿ ಆಗಲು ಬಿಡಬೇಡಿ

ಮೊಬೈಲ್‌ ಅತ್ಯುತ್ತಮ ಕಾರ್ಯವೈಖರಿಗೆ ಅದರ ಬ್ಯಾಟರಿಯೇ ಪ್ರಮುಖ ಕಾರಣ. ಹೀಗಾಗಿ ಮೊಬೈಲ್‌ ಪೂರಕವಾಗದ ಬ್ಯಾಟರಿ ಅನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಅಂದರೇ ಮೊಬೈಲ್‌ ಬ್ಯಾಟರಿ ಲೆವಲ್ ಪೂರ್ಣ ಖಾಲಿ ಆಗುವವರೆಗೂ ಮೊಬೈಲ್‌ ಬಳಕೆ ಮಾಡುವುದು ಸರಿಯಾದ ಕ್ರಮವಲ್ಲ. ಮೊಬೈಲ್‌ ಬ್ಯಾಟರಿ ಶೇ. 30% ಅಥವಾ 20% ರ ಸನಿಹ ಬಂದಾಗ ಚಾರ್ಜ್ ಗೆ ಹಾಕುವುದು ಅಗತ್ಯ.

ಮೊಬೈಲ್‌ ಚಾರ್ಜ್‌ ಆದಾಗ ಚಾರ್ಜಿಂಗ್ ನಿಲ್ಲಿಸಿ

ಕೆಲವು ಬಳಕೆದಾರರು ಮೊಬೈಲ್‌ ಪೂರ್ಣ ಚಾರ್ಜ್ ಆಗಿದ್ದರೂ, ಅದರತ್ತ ಗಮನ ನೀಡುವುದಿಲ್ಲ ಅದರ ಚಾರ್ಜರ್ ಕನೆಕ್ಷನ್‌ ತೆಗೆಯುವುದಿಲ್ಲ. ಹೀಗೆ ಪೂರ್ಣ ಚಾರ್ಜ್ ಆದರೂ, ಚಾರ್ಜಿಂಗ್ ಮುಂದುವರೆಸಿದರೆ, ಮೊಬೈಲ್‌ ಬ್ಯಾಟರಿ ಹಾನಿ ಆಗುತ್ತದೆ. ನಿಮ್ಮ ಮೊಬೈಲ್‌ 92% ನಿಂದ 96% ನಷ್ಟು ಚಾರ್ಜ್‌ ಆಗಿದ್ದರೆ, ಚಾರ್ಜರ್ ನಿಲ್ಲಿಸಿ ಬಿಡಿ. ಪೂರ್ಣ 100% ಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ. ಬ್ಯಾಟರಿ ದಕ್ಷತೆಯ ದೃಷ್ಠಿಯಿಂದ ಪೂರ್ಣ 100% ಚಾರ್ಜಿಂಗ್ ಬೇಡಾ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries