HEALTH TIPS

ಇಂದು 'ರಾಷ್ಟೀಯ ಏಕತಾ' ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ | National Unity Day

 ಭಾರತದ ಸ್ವಾತಂತ್ರ್ಯ ಹೋರಾಟಗಾರ, ಉಕ್ಕಿನ ಮನುಷ್ಯರೆಂದೇ ಪ್ರಸಿದ್ದರಾದ, ದೇಶೀಯ ಸಂಸ್ಥಾನಗಳನ್ನು ಒಟ್ಟುಗೂಡಿಸುವಲ್ಲಿ ಮುಂಚೂಣಿಯಲ್ಲಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ನೆನಪಿಗಾಗಿ ದೇಶಾದ್ಯಂತ ಅಕ್ಟೋಬರ್ 31 ರಂದು ರಾಷ್ಟಿçÃಯ ಏಕತಾ ದಿನಾಚರಣೆ ಆಚರಿಸಲಾಗುತ್ತದೆ.

ರಾಷ್ಟ್ರೀಯ ಏಕತಾ ದಿನದ ಆಚರಣೆಯು ರಾಷ್ಟçದ ಏಕತೆ, ಸಮಗ್ರತೆ ಮತ್ತು ನೆರೆಹೊರೆಯನ್ನು ಎತ್ತಿಹಿಡಿಯುವ ಮೂಲಕ ರಾಷ್ಟ್ರದ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಚಿತ್ರಿಸುತ್ತದೆ. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ‍್ಯ ಪಡೆದ ನಂತರ ವಿವಿಧ ಪ್ರಾಂತ್ಯಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸಲು ಪಟೇಲ್ ಅವರು ಎಲ್ಲಾ 565 ಸ್ವ-ಆಡಳಿತದ ರಾಜಪ್ರಭುತ್ವದ ರಾಜ್ಯಗಳನ್ನು ಯಶಸ್ವಿಯಾಗಿ ಮನವೊಲಿಸಿ ರಾಷ್ಟç ನಿರ್ಮಾಣ ಮಾಡಿದರು.

ಭಾರತವು ಆಂಗ್ಲರಿAದ ಸ್ವಾತಂತ್ರö್ಯವನ್ನು ಪಡೆದುಕೂಳ್ಳುವುದಕ್ಕೆ ಎಷ್ಟು ಅಡಚಣೆಗಳು ಎದುರಾದವೋ, ಅದೇ ರೀತಿ ಸ್ವತಂತ್ರ ಭಾರತವನ್ನು ಎಲ್ಲಾ ದೇಶಿಯಾ ಸಂಸ್ಥಾನಗಳನ್ನು ಒಟ್ಟುಗೂಡಿಸಿ ಬಲಿಷ್ಠ ಭಾರತವನ್ನು ನಿರ್ಮಾಣ ಮಾಡಿದವರಲ್ಲಿ ಪ್ರಮುಖರು ಸರ್ದಾರ್ ವಲ್ಲಭಭಾಯ್ ಪಟೇ¯ರು. 1947 ರಿಂದ 1950 ರವರೆಗೆ ಭಾರತದ ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇವರನ್ನು ಹಿಂದಿ , ಉರ್ದು , ಬೆಂಗಾಲಿ ಮತ್ತು ಪರ್ಷಿಯನ್ ಭಾಷೆಗಳಲ್ಲಿ "ಮುಖ್ಯಸ್ಥ" ಎಂಬ ಅರ್ಥವನ್ನು ಹೊಂದಿರುವ ಸರ್ದಾರ್ ಎಂದು ಕರೆಯಲಾಗುತ್ತಿತ್ತು. ಪಟೇಲರು ಭಾರತದ ರಾಜಕೀಯ ಏಕೀಕರಣ ಮತ್ತು 1947 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದರು.

ವಲ್ಲಭಭಾಯಿ ಪಟೇಲ್ ಖೇಡಾ ಜಿಲ್ಲೆಯಲ್ಲಿ ಗ್ರಾಮ-ಗ್ರಾಮ ಪ್ರವಾಸವನ್ನು ಪ್ರಾರಂಭಿಸಿದರು, ಅಲ್ಲಿನ ಕುಂದುಕೊರತೆಗಳನ್ನು ದಾಖಲಿಸಿ ಮತ್ತು ತೆರಿಗೆ ಪಾವತಿಸುವುದನ್ನು ನಿರಾಕರಿಸುವ ಮೂಲಕ ರಾಜ್ಯಾದ್ಯಂತ ದಂಗೆಗೆ ಗ್ರಾಮಸ್ಥರನ್ನು ಬೆಂಬಲಿಸುವAತೆ ಕೇಳಿದರು. ಈ ಮೂಲಕ ಗುಜರಾತಿನ ಸತ್ಯಾಗ್ರಹದಲ್ಲಿ ಪ್ರಮುಖರಾಗಿದ್ದರು.

ಸರ್ದಾರ್ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಮೂಲಭೂತ ಹಕ್ಕುಗಳು ಮತ್ತು ಆರ್ಥಿಕ ನೀತಿ ನಿರ್ಣಯವನ್ನು ಕಾಂಗ್ರೆಸ್ 1931 ರಲ್ಲಿ ಅಂಗೀಕರಿಸಿತು. ಸುಭಾಷ್ ಚಂದ್ರ ಬೋಸ್ ಅವರೊಂದಿಗೆ ಕಾನೂನು ಹೋರಾಟದಲ್ಲಿ ಪಾಲ್ಗೊಂಡಿದ್ದÀರು. ಆಗಸ್ಟ್ 9 ರಂದು ಪಟೇಲ್ ಅವರನ್ನು ಬಂಧಿಸಲಾಯಿತು ಮತ್ತು 1942 ರಿಂದ 1945 ರವರೆಗೆ ಇಡೀ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯೊಂದಿಗೆ ಅಹಮದ್‌ನಗರದ ಕೋಟೆಯಲ್ಲಿ ಜೈಲಿನಲ್ಲಿರಿಸಲಾಯಿತು. 1945 ರ ಜೂನ್ 15 ರಂದು ಬಂಧಿಖಾನೆಯಿAದ ಬಿಡುಗಡೆಗೊಳಿಸಲಾಯಿತು.

ರಾಜ ತಾಂತ್ರಿಕ ನೀತಿಯಿಂದ 565 ದೇಶೀಯ ಸಂಸ್ಥಾನಗಳನ್ನು ಸೇರಿಸಲು ಸಂಪೂರ್ಣ ರಾಷ್ಟç ನಿರ್ಮಾಣದ ಕೆಲಸದ ಮುಖ್ಯಸ್ಥರಾಗಿದ್ದರು. ಸ್ಥಳೀಯ ಸಂಸ್ಥಾನಗಳಲ್ಲಿ ದೇಶಪ್ರೇಮದಿಂದ ವರ್ತಿಸುವಂತೆ ಆಡಳಿತಗಾರರನ್ನು ಪ್ರೋತ್ಸಾಹಿಸಿದರು. ಪಟೇ¯ರು, ರಾಜರುಗಳು ಭಾರತಕ್ಕೆ ಸದ್ಭಾವನೆಯಿಂದ ಸಮ್ಮತಿಸಬೇಕೆಂದು ಒತ್ತಿಹೇಳಿದರು. ಪಟೇಲರು ರಾಜರುಗಳಿಗೆ 1947 ರ ಆಗಸ್ಟ್ 15 ರೊಳಗೆ ಪ್ರವೇಶ ಪತ್ರಕ್ಕೆ ಸಹಿ ಹಾಕಲು ಗಡುವನ್ನು ನಿಗದಿಪಡಿಸಿದರು. ಮೂರು ಸಂಸ್ಥಾನಗಳು ಹೊರತುಪಡಿಸಿ ಎಲ್ಲಾ ಸಂಸ್ಥಾನಗಳು ಸ್ವಇಚ್ಛೆಯಿಂದ ಭಾರತೀಯ ಒಕ್ಕೂಟದಲ್ಲಿ ವಿಲೀನಗೊಂಡವು. ಜಮ್ಮು ಮತ್ತು ಕಾಶ್ಮೀರ , ಜುನಾಗಢ ಮತ್ತು ಹೈದರಾಬಾದ್ ಮಾತ್ರ ಒಪ್ಪಿಗೆ ನೀಡಿರಲಿಲ್ಲ, ಕಾಲಾಂತರದಲ್ಲಿ ಅವುಗಳು ಭಾರತದ ಒಕ್ಕೂಟಕ್ಕೆ ಸಹಿ ಹಾಕಿದವು.

ಸರ್ದಾರ್ ವಲ್ಲಭಭಾಯ್ ಪಟೇ¯ರು ಭಾರತದ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಮಾತ್ರ ಅಲ್ಲದೆ ಸ್ವತಂತ್ರ ಪಡೆದ ನಂತರ ಭಾರತ ದೇಶ ರಚನೆ ಮಾಡುವ ಮೂಲಕ ದೇಶಕ್ಕಾಗಿ ತಮ್ಮ ಜೀವನ ಮುಡಿಪಾಗಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಅಪಾರ ಕೊಡುಗೆಗಳನ್ನು ಗೌರವಿಸುವ ಸಲುವಾಗಿ, ಭಾರತ ಸರ್ಕಾರವು ಗುಜರಾತ್‌ನ ನರ್ಮದಾ ನದಿಯ ಬಳಿ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಸ್ಥಾಪಿಸಿದೆ. ಇದನ್ನು " ಏಕತೆಯ ಪ್ರತಿಮೆ " ಎಂದು ಕರೆಯಲಾಗುತ್ತದೆ ಮತ್ತು ಇದನ್ನು ವಿಶ್ವದ 8 ನೇ ಅದ್ಭುತ ಎಂದೂ ಕರೆಯಲಾಗುತ್ತದೆ. ಭಾರತೀಯ ಶಿಲ್ಪಿ ರಾಮ್ ವಿ ಸುತಾರ್ ಈ ಪ್ರತಿಮೆಯನ್ನು ವಿನ್ಯಾಸಗೊಳಿಸಿದ್ದಾರೆ.

ಏಕತೆಯ ಪ್ರತಿಮೆಯು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ , ಇದು 182 ಮೀಟರ್ (597 ಅಡಿ) ಎತ್ತರವನ್ನು ಹೊಂದಿದೆ, ಈ ಪ್ರತಿಮೆಯು ಭಾರತದ ಗುಜರಾತ್‌ನ ನರ್ಮದಾ ನದಿಯ ಕೆವಾಡಿಯಾ ಕಾಲೋನಿಯಲ್ಲಿದೆ. ವಡೋದರಾ ನಗರದ ಆಗ್ನೇಯಕ್ಕೆ 100 ಕಿಲೋಮೀಟರ್ ಸರ್ದಾರ್ ಸರೋವರ್ ಅಣೆಕಟ್ಟಿಗೆ ಎದುರಾಗಿದೆ .ಇದರ ಒಟ್ಟು ನಿರ್ಮಾಣ ವೆಚ್ಚ ₹ 27 ಬಿಲಿಯನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2018 ರ ಅಕ್ಟೋಬರ್ 31 ರಂದು ಪಟೇಲ್ ಅವರ ಜನ್ಮದಿನದ 143 ನೇ ವಾರ್ಷಿಕೋತ್ಸವದಂದು ಇದನ್ನು ಉದ್ಘಾಟಿಸಿದರು. ಈ ದಿನವನ್ನು ಆಚರಿಸಲು, ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ವ್ಯಕ್ತಿಗಳ ಅಮೂಲ್ಯ ಕೊಡುಗೆಗಳನ್ನು ಗೌರವಿಸಲು ಮತ್ತು ಗುರುತಿಸಲು ಸರ್ಕಾರವು ಸರ್ದಾರ್ ಪಟೇಲ್ ರಾಷ್ಟ್ರೀಯ ಏಕತಾ ಪ್ರಶಸ್ತಿಯನ್ನು ಸಹ ನೀಡುತ್ತಿದೆ.

ಭಾರತೀಯ ರಾಜನೀತಿತಜ್ಞ ಮತ್ತು ಸ್ವಾತಂತ್ರ‍್ಯ ಹೋರಾಟಗಾರ ವಲ್ಲಭಭಾಯಿ ಪಟೇಲ್ ಅವರು 1950 ರ ಡಿಸೆಂಬರ್ 15 ರಂದು ಅವರು ಹೃದಯಾಘಾತ ಮತ್ತು ಅನಾರೋಗ್ಯದಿಂದ ಕೊನೆಯುಸಿರೆಳೆದರು.ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿ ಮತ್ತು ಭಾರತದ ರಾಜಕೀಯ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಪಟೇಲ್ ಅವರು ಭಾರತೀಯರಲ್ಲಿ ಏಕತೆಯ ಭಾವನೆ ಬಿತ್ತುವ ಮೂಲಕ ರಾಷ್ಟç ನಿರ್ಮಾಣ ಮಾಡಿದರು. ಅವರ ತತ್ವಗಳು, ಆದರ್ಶಗಳು, ಏಕತೆಯ ಭಾವನೆಯನ್ನು ಭಾರತೀಯರು ಅನುಸರಿಸಬೇಕಾಗಿದೆ. ಇದರ ಮೂಲಕ ವಿಭಿನ್ನ ಭಾಷೆ, ಪ್ರಾಂತ್ಯ, ಸಂಸ್ಕೃತಿ ಹೊಂದಿದ ನಮ್ಮ ದೇಶ ಏಕತೆಯಿಂದ ಅಭಿವೃದ್ದಿ ಹೊಂದಬೇಕು ಎಂಬುದು ಅವರ ಆಶಯವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries