ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಆಗಸ್ಟ್‌ನಲ್ಲಿ ಅತ್ಯುತ್ಸಾಹದಿಂದ ಆರಂಭಿಸಿದ ರಾಷ್ಟ್ರೀಯ ವೈದ್ಯಕೀಯ ನೋಂದಣಿ (NMR) ಪೋರ್ಟಲ್‌ನಲ್ಲಿ ನೋಂದಾಯಿಸಲು ಸಾವಿರಾರು ಎಂಬಿಬಿಎಸ್ ವೈದ್ಯರು ಹೆಣಗಾಡುತ್ತಿದ್ದಾರೆ.
ಈಗ ಕೇವಲ ಆಧಾರ್ ಮಾತ್ರ ಅಪ್‌ಲೋಡ್ ಮಾಡದೆ, ಅವರ ಹೆಸರುಗಳು ಅಥವಾ ರಾಜ್ಯ ವೈದ್ಯಕೀಯ ಮಂಡಳಿಯ ಹೆಸರುಗಳು ಪ್ರಸ್ತುತ ಡೇಟಾಗೆ ಹೊಂದಿಕೆಯಾಗದಿದ್ದರೆ ಅಫಿಡವಿಟ್ ನ್ನು ಸಹ ಅಪ್‌ಲೋಡ್ ಮಾಡಲು ವೈದ್ಯರಿಗೆ ಕೇಳಲಾಗುತ್ತಿದೆ.
ಇದು ವಿಶೇಷವಾಗಿ ಕೇರಳಕ್ಕೆ ಅನ್ವಯವಾಗುತ್ತದೆ. ಅಲ್ಲಿ ರಾಜ್ಯ ವೈದ್ಯಕೀಯ ಮಂಡಳಿಯ ಹೆಸರು ಬದಲಾಗಿದೆ. ಇದರ ಪರಿಣಾಮವಾಗಿ ವೈದ್ಯರು ಆರಂಭದಿಂದ ಹಿಡಿದು ಈಗಿರುವ ಹುದ್ದೆಯವರೆಗೆ ಎಲ್ಲಾ ಮಾಹಿತಿಯನ್ನು ಸಮಗ್ರವಾಗಿ NMR ಪೋರ್ಟಲ್ ನಲ್ಲಿ ನೋಂದಾಯಿಸಬೇಕಾಗುತ್ತದೆ. NMR ಪೋರ್ಟಲ್ ಭಾರತದಲ್ಲಿನ ಆಲೋಪಥಿ ವೈದ್ಯರ ಸಮಗ್ರ ಡೇಟಾಬೇಸ್ ಆಗಿದೆ.
ವೈದ್ಯರ ನೋಂದಣಿ ಪ್ರಕ್ರಿಯೆ ಸಾಕಷ್ಟು ಜಟಿಲವಾಗಿದ್ದು, ಈ ವಿಷಯವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗದ( NMC) ಗಮನಕ್ಕೆ ತರುತ್ತೇವೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಕೆ.ವಿ.ಅಶೋಕನ್ ಹೇಳಿದ್ದಾರೆ.
ಇದು ತಾಂತ್ರಿಕ ಸಮಸ್ಯೆಯಾಗಿದ್ದರೆ ಕೂಡಲೇ ಸರಿಪಡಿಸಬೇಕು. ಇದನ್ನು ಸುಲಭವಾಗಿ ಪರಿಹರಿಸಬಹುದು. NMC ಕಾರ್ಯವಿಧಾನವನ್ನು ಸರಳಗೊಳಿಸಬೇಕು ಮತ್ತು ಸ್ವರೂಪವನ್ನು ಬದಲಾಯಿಸಬೇಕು. ಅವರು ನೋಂದಣಿಯನ್ನು ಆಧಾರ್‌ನೊಂದಿಗೆ ಡಿಲಿಂಕ್ ಮಾಡಬೇಕು ಎಂದು ಒತ್ತಾಯಿಸಿದರು. ಎನ್‌ಎಂಆರ್ ಪೋರ್ಟಲ್ ಕುರಿತು ಎನ್‌ಎಂಸಿ ಅಧ್ಯಕ್ಷ ಡಾ ಬಿ.ಎನ್. ಗಂಗಾಧರ್ ಅವರೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ಅವರು ತಿಳಿಸಿದರು.