ಸಾಮಾನ್ಯವಾಗಿ ಕ್ಯಾಲೆಂಡರ್ (Calendar) ಇಲ್ಲದ ಮನೆಗಳಿಲ್ಲ, ಅದರೊಂದಿಗೆ ಜನರ ಜೀವಾಳವಾಗಿರುವ ಮೋಬೈಲ್ ನಲ್ಲಿಯೂ ಕ್ಯಾಲೆಂಡರ್ ಸಿಗುವುದರೊಂದಿಗೆ ಜನರು, ಪ್ರತಿದಿನವು ಅದರ ವಿಷೇಶತೆಗಳನ್ನು ತಿಳಿಯುವುದ್ದಕಾಗಿ ಮತ್ತು ವಾರ, ಅಮಾವಾಸ್ಯೆ, ಹುಣ್ಣಿಮೆ, ರಜೆ, ನಕ್ಷತ್ರ ಸೇರಿದಂತೆ ಹಬ್ಬಗಳ ಮಾಹಿತಿ ಹಾಗೂ ದಿನದ ಕಾಲಗಳನ್ನು ತಿಳಿದುಕೊಳ್ಳಲು ಕ್ಯಾಲೆಂಡರ್ ನೋಡುತ್ತೇವೆ.
ಜನರ ಪ್ರತಿದಿನದ ಜೊತೆಗಾರನಾಗಿರುವ ಈ ಕ್ಯಾಲೆಂಡರ್ಗಳು ಎಲ್ಲಿ ಹೋದರು, ಯಾವಗಲೂ ಒಂದೇ ತರಹದ ಮಾಹಿತಿಗಳನ್ನು ಒಳಗೊಂಡಿರುತ್ತವೆ. ಆದರೆ ಈ ಕ್ಯಾಲೆಂಡರ್ಗಳಲ್ಲಿ ಎನಾದರು ದಿನಗಳು ತಪ್ಪಾಗಿದ್ದರೆ ಅಥವಾ ಮುದ್ರಣ ಸಮಸ್ಯೆಯಿಂದ ದಿನಗಳು ಹೆಚ್ಚು ಕಡಿಮೆಯಾಗಿರುವುದನ್ನು ನೋಡಿರಬಹುದು, ಆಂತಹದೆ ಒಂದು ಘಟನೆಯಿಂದ ನಾವು 5 ಶತಮಾನಗಳನ್ನು ತಪ್ಪಾಗಿ ಕಳೆದಿದ್ದೆವಾ?
ಅಕ್ಟೋಬರ್ ತಿಂಗಳಲ್ಲಿ 10 ದಿನಗಳು ಮದ್ರಣವೇ ಆಗಿರಲಿಲ್ಲ!
ಹೌದು, ಇಂತಹದ್ದೆ ಒಂದು ಅಚ್ಚರಿಯ ಘಟನೆ ಐದು ಶತಮಾನಗಳ ಹಿಂದೆ, 1582 ರಲ್ಲಿ ನಡೆದಿದೆ ಎನ್ನಲಾಗಿದೆ. ಇದರೊಂದಿಗೆ 1582ರ ಅಕ್ಟೋಬರ್ ತಿಂಗಳಲ್ಲಿ 10 ದಿನಗಳು ಕಡಿಮೆಯಾಗಿದ್ದು, ಮದ್ರಣವೇ ಆಗಿರಲಿಲ್ಲ ಎನ್ನಲಾಗಿದೆ. ಇದರೊಂದಿಗೆ ಅಕ್ಟೋಬರ್‌ನಲ್ಲಿ ಕೇವಲ 21 ದಿನಗಳಿತ್ತು ಎನ್ನಲಾಗಿದೆ.
ಗ್ರೆಗೋರಿಯನ್ ಕ್ಯಾಲೆಂಡರ್ ಪಾಲನೆ
1582ರ ಅಕ್ಟೋಬರ್ ತಿಂಗಳಲ್ಲಿ ಮುದ್ರಣವಾದ ಕ್ಯಾಲೆಂಡರ್‌ನಲ್ಲಿ 4 ನೇ ತಾರಿಖು ಮುಗಿದ ನಂತರ ನೇರವಾಗಿ 15 ನೇ ತಾರಿಖು ಮುದ್ರಣವಾಗಿದೆ. ಇದು, ನಾವೆಲ್ಲರೂ ಅನುಸರಿಸುತ್ತಿರುವ ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲೆ ನಡೆದಿರುವುದರಿಂದ, ಅಂದಿನಿಂದ ಇಂದಿನವರೆಗೆ ನಾವು ದಿನಗಳನ್ನು ತಪ್ಪಾಗಿ ಲೆಕ್ಕ ಹಾಕಿದ್ದೇವೆ ಎಂದು ವರದಿಯಾಗಿದೆ.
10 ದಿನಗಳು ತಪ್ಪಾಗಿ ನಾವು ಲೆಕ್ಕ
ಆದರೆ ಇದು ಎಲ್ಲರ ಅಚ್ಚರಿಗೂ ಕಾರಣವಾಗಿದ್ದು, ಹೇಗೆ ನಾವು 10 ದಿನಗಳು ತಪ್ಪಾಗಿ ನಾವು ಲೆಕ್ಕ ಹಾಕುತ್ತಿದ್ದೇವೆ ಎಂಬ ಕುತೂಹಲವು ಹಲವರಲ್ಲಿ ಮೂಡಿದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಇರುವ ಕ್ಯಾಲೆಂಡರ್ನಲ್ಲಿಯು ಕಾಣಬಹುದಾಗಿದೆ. ಹಾಗಾದ್ರೆ ಕ್ಯಾಲೆಂಡರ್‌ನಲ್ಲಿ ತಪ್ಪು ಆಗಿರೋದು ಯಾಕೆ? 1582ರಲ್ಲಿನ ಆ 10 ದಿನಗಳು ಎಲ್ಲಿ ಹೋದವು ಎಂಬ ಅಚ್ಚರಿಯ ಮಾಹಿತಿಗೆ ಉತ್ತರ ಇಲ್ಲಿದೆ.
ಅಧಿಕ ವರ್ಷದ ದಿನಗಳನ್ನು ಸರಿದೂಗಿಸಲು ಹತ್ತು ದಿನ ಕಡಿಮೆ
1582ರ ಅಕ್ಟೋಬರ್‌ನಲ್ಲಿ 10 ದಿನಗಳು ಕಡಿಮೆ ಇರಲು ಯಾವುದೇ ಮುದ್ರಣದ ಅಥವಾ ಕಣ್ತಪ್ಪಿನಿಂದ ಉಂಟಾದ ಘಟನೇ ಅಲ್ಲ. ಬದಲಿಗೆ, ಅಧಿಕ ವರ್ಷದ ದಿನಗಳನ್ನು ಸರಿದೂಗಿಸಲು ಆ ವರ್ಷ ಹತ್ತು ದಿನಗಳನ್ನು ಕಡಿಮೆ ಮಾಡಲಾಗಿದೆ ಎಂದು ಅಮೇರಿಕಾದ ಹೆಸರಾಂತ ಖಗೋಳ ಭೌತಶಾಸ್ತ್ರಜ್ಞ ಮತ್ತು ವಿಜ್ಞಾನ ಸಂವಹನಕಾರನಾಗಿರುವ ನೀಲ್ ಡಿಗ್ರಾಸ್ ಟೈಸನ್ ಅವರು ಹೇಳಿದರು.
ಫೆಬ್ರವರಿಯಲ್ಲಿ 29 ದಿನಗಳು ಇರಲಿಲ್ಲ
1582 ರ ತನಕ ನಾವು ಪಾಲಿಸುತ್ತಿರುವ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಬರುವ ಅಧಿಕ ವರ್ಷವನ್ನು ಲೆಕ್ಕ ಹಾಕುತ್ತಿರಲಿಲ್ಲ. ಅಂದು ಈಗಿನಂತೆ ಫೆಬ್ರವರಿಯಲ್ಲಿ 29 ದಿನಗಳು ಇರಲಿಲ್ಲ. ಆದ್ರೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೇಗೆ ಲೆಕ್ಕ ಹಾಕಿದರೂ ದಿನಗಳು ಹೆಚ್ಚಿಗೆ ಬರುತ್ತಿದ್ದವು. ಇದರಿಂದ ಕ್ಯಾಲೆಂಡರ್ ರಚನೆಯಲ್ಲಿ ಹಾಗೂ ದಿನಗಳನ್ನು ಲೆಕ್ಕ ಹಾಕಲು ಸಮಸ್ಯೆಗಳು ತಂದೊಡ್ಡಿತ್ತು.
ತಪ್ಪು ಸರಿಪಡಿಸಲು ಪೋಪ್ ಗ್ರೆಗೊರಿ XIII ಅವರ ಅನುಮತಿ
ಹೀಗಾಗಿ, ಇದನ್ನು ಸರಿದೂಗಿಸಲು ಅಂದಿನ ಪೋಪ್ ಗ್ರೆಗೊರಿ XIII ಅವರ ಅನುಮತಿಯೊಂದಿಗೆ 1582ರ ಅಕ್ಟೋಬರ್‌ನಲ್ಲಿ ಎಲ್ಲಾ ಅಧಿಕ ವರ್ಷಗಳ ದಿನಗಳನ್ನು ಕಳೆಯಲು ನಿರ್ಧರಿಸಲಾಗಿತ್ತು. ಅಂದರೆ ಎಲ್ಲಾ ಅಧಿಕ ವರ್ಷದಿಂದ ಒಂದೊಂದು ದಿನ ತೆಗೆದು ಒಟ್ಟು 10 ದಿನಗಳನ್ನು ಒಂದೇ ತಿಂಗಳಿನಲ್ಲಿ ಅಳಿಸಲಾಗಿತ್ತು. ಇದರಿಂದ ಅಕ್ಟೋಬರ್‌ನಲ್ಲಿ ಕೇವಲ 21 ದಿನಗಳು ಮಾತ್ರ ಇದ್ದವು.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಧಿಕ ವರ್ಷ
ಒಂದೆ ಬಾರಿ ಹತ್ತು ದಿನಗಳನ್ನು ಕಡಿಮೆ ಮಾಡಿದ್ದರಿಂದ ಹಲವು ಸಮಸ್ಯೆಗಳು ಉಂಟಾಯಿತು. ಆದ್ದರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಧಿಕ ವರ್ಷವೆಂದು, ಫೆಬ್ರವರಿ ತಿಂಗಳಿನಲ್ಲಿ ಹೆಚ್ಚುವರಿಯಾಗಿ 1 ದಿನವನ್ನು ಸೇರಿಸಿ ನಾಲ್ಕು ವರ್ಷಕ್ಕೊಮ್ಮೆ 29ನೇ ದಿನ ಬರುವಂತೆ ಮಾಡಲಾಯಿತು. ಇದರಿಂದ ಅಂದು 10 ದಿನ ಕಳೆಯದ ಕಾರಣ ನಾವು ಇಂದು ಸರಿಯಾದ ದಿನಾಂಕವನ್ನು ಲೆಕ್ಕ ಮಾಡುತ್ತಿದ್ದೆವೆ. ಇಲ್ಲದೇ ಹೋದರೆ ನಾವು ಇಂದು ತಪ್ಪು ದಿನಾಂಕದಲ್ಲಿರಬೇಕಾಗುತ್ತಿತ್ತು.