ನವದೆಹಲಿ: ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುವನ್ನು ಹತ್ಯೆಮಾಡುವ ಸಂಚಿನಲ್ಲಿ ಭಾರತ ಸರ್ಕಾರದ ಮಾಜಿ ಅಧಿಕಾರಿ ವಿಕಾಸ್ ಯಾದವ್(.( Former RAW Officer) ವಿರುದ್ಧ ಭಾಗಿಯಾಗಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಆರೋಪಿಸಿದ್ದಾರೆ.
FBI ಆರೋಪವೇನು?
ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ವಿಕಾಸ್ ಯಾದವ್ ಅವರನ್ನು ವಾಂಟೆಡ್ ಲಿಸ್ಟ್ನಲ್ಲಿ ಸೇರಿಸಿದೆ. ಖಲಿಸ್ತಾನ್ ಪರ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ರೂಪಿಸಿದ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ವಿಕಾಸ್ ಯಾದವ್ ಮೇಲೆ ಆರೋಪವಿದೆ. ವಿಕಾಸ್ ಯಾದವ್ ವಿರುದ್ಧ ಎಫ್‌ಬಿಐ ಅಕ್ಟೋಬರ್ 10ರಂದು ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ಇದಾದ ನಂತರ ಎಫ್‌ಬಿಐ ವಿಕಾಸ್‌ನ ಮೂರು ಭಾವಚಿತ್ರಗಳಿರುವ 'ವಾಂಟೆಡ್' ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ನ್ಯಾಯಾಂಗ ಇಲಾಖೆ (ಡಿಒಜೆ) ಕೇಳಿದ ಪ್ರಶ್ನೆಗೆ ಉತ್ತರಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ವಿಕಾಸ್ ಯಾದವ್ ಇನ್ನು ಮುಂದೆ ಭಾರತ ಸರ್ಕಾರದ ಉದ್ಯೋಗಿ ಅಲ್ಲ ಎಂದು ಖಚಿತಪಡಿಸಿದ್ದಾರೆ.
ಈ ಪ್ರಕರಣದಲ್ಲಿ ವಿಕಾಸ್ ಯಾದವ್ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ (ಯುಎಸ್ ಕಾನೂನು ಇಲಾಖೆ) 18 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ. ಚಾರ್ಜ್ಶೀಟ್ನಲ್ಲಿ ವಿಕಾಸ್ ಯಾದವ್ ಹೆಸರನ್ನು 'ಸಿಸಿ-1' (ಸಹ ಸಂಚುಕೋರ) ಎಂದು ನಮೂದಿಸಲಾಗಿದೆ. ವಿಕಾಸ್ ಯಾದವ್ ಸಹಚರ ನಿಖಿಲ್ ಗುಪ್ತಾ ಅವರನ್ನು ಜೆಕ್ ರಿಪಬ್ಲಿಕ್ನಿಂದ ಬಂಧಿಸಲಾಗಿತ್ತು. ನಂತರ ಅವರನ್ನು ಜೆಕ್ ಗಣರಾಜ್ಯದಿಂದ ಯುನೈಟೆಡ್ ಸ್ಟೇಟ್ಸ್ಗೆ ಹಸ್ತಾಂತರಿಸಲಾಯಿತು. ಸದ್ಯ ನಿಖಿಲ್ ಗುಪ್ತಾ ಅಮೆರಿಕದ ಜೈಲಿನಲ್ಲಿದ್ದಾರೆ.
ವಿಕಾಸ್ ಯಾದವ್ ಭಾರತೀಯ ಮಾಜಿ RAW ಅಧಿಕಾರಿ. ಆರೋಪಿ ವಿಕಾಸ್ ಯಾದವ್ ಒಬ್ಬ ಭಾರತೀಯ ಸರ್ಕಾರಿ ಉದ್ಯೋಗಿಯಾಗಿದ್ದು, ಅವರು ಕ್ರಿಮಿನಲ್ ಸಹಚರರೊಂದಿಗೆ ಸಂಚು ರೂಪಿಸಿದ್ದಾರೆ ಮತ್ತು ಅಮೆರಿಕಾದ ನೆಲದಲ್ಲಿ ಅಮೇರಿಕನ್ ಪ್ರಜೆಯನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇ ಹೇಳಿದ್ದಾರೆ.
ಭಾರತ ಸರ್ಕಾರದ ನಿಲುವು ಏನು?
ಈ ಬಗ್ಗೆ ಭಾರತ ಸರ್ಕಾರ ಎಫ್‌ಬಿಐಗೆ ಪ್ರತಿಕ್ರಿಯೆ ನೀಡಿದೆ. ಅಮೆರಿಕದ ನೆಲದಲ್ಲಿ ಯಾವುದೇ ಅಮೆರಿಕನ್ ಪ್ರಜೆಯನ್ನು ಕೊಲ್ಲುವ ಇಂತಹ ಯಾವುದೇ ಸಂಚಿನಲ್ಲಿ ಭಾರತ ಭಾಗಿಯಾಗಿಲ್ಲ ಎಂದು ಹೇಳುವು ಮೂಲಕ ಆರೋಪವನ್ನು ನಿರಾಕರಿಸಿದೆ. ಆದರೆ ಅಮೆರಿಕದ ಆರೋಪಗಳಿಂದಾಗಿ ಈ ಬಗ್ಗೆ ತನಿಖೆ ನಡೆಸಲು ಭಾರತದ ಕಡೆಯಿಂದ ತನಿಖಾ ಸಮಿತಿಯನ್ನು ರಚಿಸಲಾಗಿತ್ತು. ಇದಾದ ನಂತರ ಈ ವಿಚಾರದಲ್ಲಿ ಭಾರತದಿಂದ ದೊರೆತ ಸಹಕಾರದ ಬಗ್ಗೆ ಅಮೆರಿಕ ತೃಪ್ತಿ ವ್ಯಕ್ತಪಡಿಸಿದೆ.