ಬದಿಯಡ್ಕ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಕಾಸರಗೋಡು ಹಾಗೂ ಜನಜಾಗೃತಿ ವೇದಿಕೆ ಬದಿಯಡ್ಕ ವಲಯದ ಆಶ್ರಯದಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮದಿನಾಚರಣೆ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಬುಧವಾರ ಆಚರಿಸಲಾಯಿತು.
ಬದಿಯಡ್ಕ ಜನಮೈತ್ರಿ ಪೋಲೀಸ್ ಅಧಿಕಾರಿ ಶೀನು ಅವರು ದೀಪ ಬೆಳಗಿಸಿ, ಪುಷ್ಪಾರ್ಚನೆಗೈದು ಗಾಂಧೀಜಿ ಈ ದೇಶಕ್ಕೆ ನೀಡಿದ ನಿರಶನ ಹೋರಾಟ ಕೊಡುಗೆ, ಸಾಹಿತ್ಯ ಕೊಡುಗೆ, ತತ್ವಗಳು, ಬೋಧನೆ, ಸ್ವಾತಂತ್ರ್ಯ ಹೋರಾಟ, ಸಿದ್ಧಾಂತಗಳು ಎಲ್ಲ ರೀತಿಯ ಕೊಡುಗೆಗಳಿಂದ ರಾಷ್ಟ್ರಪಿತನಾಗಿ ಎಲ್ಲರ ಮನದಲ್ಲಿ ಉಳಿದಿದ್ದಾರೆ. ಜಗತ್ತಿನಲ್ಲಿ ಶಾಂತಿ ಮತ್ತು ಅಹಿಂಸೆ ಬಗ್ಗೆ ಮಾತನಾಡುವಾಗ ಮೊದಲು ನೆನಪಾಗುವುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ. ಸ್ವತಂತ್ರ ಹೋರಾಟದ ಹಾದಿಯಲ್ಲಿ ಅಹಿಂಸೆಯನ್ನು ಪ್ರತಿಪಾದಿಸುತ ತಮ್ಮ ಜೀವನ ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟು ವ್ಯಕ್ತಿ ಹೀಗಾಗಿ ಭಾರತದ ಸ್ವತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಿದರು ಹಾಗೂ ಶಾಂತಿಯುತ ಅಹಿಂಸೆ ಪ್ರತಿಪಾದಕರಾಗಿ ಮಹಾತ್ಮ ಗಾಂಧೀಜಿಯವರು ಲೋಕಪಿತ ಎಂದು ತಿಳಿಸಿದರು
.ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಅವರು ಅಧ್ಯಕ್ಷತೆ ವಹಿಸಿ ದೇಶ ಕಂಡ ಅಪ್ರತಿಮ ಆಡಳಿತಗಾರ, ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಲಾಲ್ ಬಹದ್ಧೂರ್ ಶಾಸ್ತ್ರೀ ಅವರ ಸಾಧನೆಗಳನ್ನು ನೆನೆಯುವ ದಿನವು ಹೌದು. ಅಪ್ಪಟ ದೇಶಾಭಿಮಾನಿ ಆಗಿದ್ದ ಅವರ ಕುರಿತ ಅಪರೂಪದ ಸಂಗತಿಗಳನ್ನು ಈ ದಿನ ನೆನೆಯುವುದು ಅತ್ಯಗತ್ಯವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಅನುಯಾಯಿಯಾಗಿ ಅವರ ಕೊಡುಗೆಯು ಅಪಾರವಾಗಿದೆ. ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ನಿಧನರಾಧ ಭಾರತದ ಏಕೈಕ ಪ್ರಧಾನಿ ಲಾಲ್ ಬಹದ್ಧೂರ್ ಶಾಸ್ತ್ರಿ.. ಅವರು, ಜೈ ಜವಾನ್, ಜೈ ಕಿಸಾನ್ ಎಂಬ ಘೋಷವಾಕ್ಯದ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಹೊಳಪು ನೀಡಿದವರು ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮುಕೇಶ್ ಶುಭಹಾರೈಸಿದರು. ರೋಟರಿ ಕ್ಲಬ್ ಬದಿಯಡ್ಕ ಅಧ್ಯಕ್ಷ ಕೇಶವ ಪಾಟಾಳಿಮ, ಸಾಮಾಜಿಕ ಮುಖಂಡ ನಾರಾಯಣ ನಂಬಿಯಾರ್ ಏತಡ್ಕ, ಅವಿನಾಶ್ ರೈ ಬದಿಯಡ್ಕ, ಕುಮಾರಿ ಪ್ರತೀಕ ಮವ್ವಾರ್, ಜನಜಾಗೃತಿ ವೇದಿಕೆ ಸದಸ್ಯ ಜಯರಾಮ ಪಾಟಾಳಿ ಪಡುಮಲೆ,.ಸುಧಾಕರ ಬದಿಯಡ್ಕ, ವಲಯ ಅಧ್ಯಕ್ಷ ತಾರನಾಥ ರೈ, ರೋಹಿತಾಕ್ಷ., ಶೌರ್ಯ ವಿಪತ್ತು ಘಟಕದ ಸದಸ್ಯರು,. ಸೌಕರ್ಣಿಕ ನವಜೀವನ ಸಮಿತಿಯ ಗಣೇಶ್ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಕವಿತಾ ಗಿರೀಶ್ ರೈ ಸ್ವಾಗತಿಸಿ, . ಕಮಲಾಕ್ಷಿ ವಂದಿಸಿದರು. ವಲಯ ಮೇಲ್ವಿಚಾರಕ ಗೋಪಾಲಕೃಷ್ಣ ನಿರೂಪಿಸಿದರು.