ಮುಂಬೈ: ದೇಶೀಯ ಷೇರು ಮಾರುಕಟ್ಟೆ(Stock Market)ಯಲ್ಲಿ ಅ.18(ಶುಕ್ರವಾರ) ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕ ಕೂಡ ಭಾರಿ ಲಾಭದೊಂದಿಗೆ ಮುಕ್ತಾಯಗೊಂಡಿವೆ. ಇದರಿಂದ ಹೂಡಿಕೆದಾರರು ಭಾರಿ ಲಾಭ ಗಳಿಸಿದ್ದಾರೆ.
ಇತ್ತೀಚಿನ ಕುಸಿತದ ನಂತರ ಸೆನ್ಸೆಕ್ಸ್ ಮತ್ತು ನಿಫ್ಟಿ ಆರಂಭಿಕ ನಷ್ಟದಿಂದ ಚೇತರಿಸಿಕೊಂಡು ಹಸಿರು ವಹಿವಾಟು ನಡೆಸಿದವು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 3.30ರ ಹೊತ್ತಿಗೆ ಬಿಎಸ್ ಇ ಸೆನ್ಸೆಕ್ಸ್ 218 ಅಂಕಗಳ ಏರಿಕೆಯೊಂದಿಗೆ 81,224 ಅಂಕಗಳಿಗೆ ಮತ್ತು ನಿಫ್ಟಿ 104 ಅಂಕಗಳ ಏರಿಕೆಯೊಂದಿಗೆ 24,854 ಅಂಕಗಳಿಗೆ ತಲುಪಿದೆ.
ಮತ್ತೊಂದೆಡೆ ಬ್ಯಾಂಕ್ ನಿಫ್ಟಿ 805 ಪಾಯಿಂಟ್‌ಗಳ ಏರಿಕೆ ಕಂಡು 52094 ಕ್ಕೆ ತಲುಪಿದರೆ, ನಿಫ್ಟಿ ಮಿಡ್-ಕ್ಯಾಪ್ 100 ಸೂಚ್ಯಂಕ 183 ಪಾಯಿಂಟ್‌ಗಳನ್ನು ಗಳಿಸಿ 58649 ಕ್ಕೆ ತಲುಪಿದೆ.
ಅ.17 ರಂದು ಭಾರಿ ನಷ್ಟ ಅನುಭವಿಸಿದ ಹೂಡಿಕೆದಾರರು ಶುಕ್ರವಾರ ತಮ್ಮ ನಷ್ಟದಿಂದ ಚೇತರಿಸಿಕೊಂಡು ಕೆಲವೇ ಗಂಟೆಗಳಲ್ಲಿ ಲಕ್ಷ ಕೋಟಿ ರೂ.ಲಾಭಗಳಿಸುವಂತಾಯಿತು.
ಇನ್ಫೋಸಿಸ್, ಏಷ್ಯನ್ ಪೇಂಟ್ಸ್, ಬ್ರಿಟಾನಿಯಾ, ನೆಸ್ಲೆ, ಎಚ್‌ಯುಎಲ್ ಕಂಪನಿಗಳ ಷೇರುಗಳು ಟಾಪ್ 5 ಲೂಸರ್ ಆಗಿದ್ದರೆ, ಆಕ್ಸಿಸ್ ಬ್ಯಾಂಕ್, ವಿಪ್ರೋ, ಐಷರ್ ಮೋಟಾರ್ಸ್, ಶ್ರೀರಾಮ್ ಫೈನಾನ್ಸ್, ಹಿಂಡಾಲ್ಕೊ ಷೇರುಗಳು ಟಾಪ್ 5 ಗೇನರ್‌ಗಳಲ್ಲಿವೆ. ಇದೇ ಸಮಯದಲ್ಲಿ, ಬಿಎಸ್‌ಇ ಸೆನ್ಸೆಕ್ಸ್‌ನ 30 ವಲಯಗಳ ಪೈಕಿ 10 ಷೇರುಗಳು ನಷ್ಟದಲ್ಲಿ ವಹಿವಾಟು ನಡೆಸಿದವು. ನಿಫ್ಟಿ 50 ರ 32 ಷೇರುಗಳು ಹಸಿರು ಬಣ್ಣದಲ್ಲಿ ವಹಿವಾಟಾಗಿವೆ.
ಐಟಿ ಸೂಚ್ಯಂಕ (ಶೇ 1.25 ರಷ್ಟು ಇಳಿಕೆ), ಎಫ್‌ಎಂಸಿಜಿ (ಶೇ 0.45 ರಷ್ಟು ಇಳಿಕೆ) ಮತ್ತು ತೈಲ ಮತ್ತು ಅನಿಲ (ಶೇ 0.19 ರಷ್ಟು ಇಳಿಕೆ) ವಲಯದ ಸೂಚ್ಯಂಕಗಳಲ್ಲಿ ಟಾಪ್ ಡ್ರಾಗ್‌ಗಳು. ಇದಕ್ಕೆ ವ್ಯತಿರಿಕ್ತವಾಗಿ ನಿಫ್ಟಿ ಬ್ಯಾಂಕ್ ಶೇ.1.64ರಷ್ಟು ಏರಿಕೆ ಕಂಡಿದೆ.