ನವದೆಹಲಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹರಣವಾಗುತ್ತಿದೆ ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕದ ಆಯೋಗವೊಂದು (USCIRF) ಪ್ರಕಟಿಸಿದ ವರದಿಯನ್ನು, ಭಾರತ ಸರಾಸಗಟಾಗಿ ತಿರಸ್ಕರಿಸಿದೆ.
ನವದೆಹಲಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹರಣವಾಗುತ್ತಿದೆ ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕದ ಆಯೋಗವೊಂದು (USCIRF) ಪ್ರಕಟಿಸಿದ ವರದಿಯನ್ನು, ಭಾರತ ಸರಾಸಗಟಾಗಿ ತಿರಸ್ಕರಿಸಿದೆ.
ಈ ಕುರಿತು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
'ನಮ್ಮ ದೃಷ್ಟಿಕೋನದಲ್ಲಿ USCIRF ಒಂದು ನಿರ್ದಿಷ್ಟ ರಾಜಕೀಯ ಉದ್ದೇಶ ಹೊಂದಿರುವ ಸಂಸ್ಥೆಯಾಗಿದೆ. ಭಾರತದ ಕುರಿತು ಅವಾಸ್ತವಿಕವಾದ ಮಾಹಿತಿ, ಪೂರ್ವಗ್ರಪೀಡಿತ ಕಟ್ಟುಕಥೆಗಳಿಂದ ಕೂಡಿದೆ. ಇಂಥ ಕೆಟ್ಟ ಪ್ರಯತ್ನಗಳಿಂದ ಈ ಸಂಸ್ಥೆ ದೂರವಿರಬೇಕು. ಅಮೆರಿಕದಲ್ಲೇ ಇರುವ ಮಾನವ ಹಕ್ಕುಗಳ ಸಮಸ್ಯೆಗಳ ಮೇಲೆ ಬೆಳೆಕು ಚೆಲ್ಲಲು ಈ ಸಂಸ್ಥೆ ತನ್ನ ಸಮಯವನ್ನು ಮೀಸಲಿಡಬೇಕು' ಎಂದು ಸಲಹೆ ನೀಡಿದ್ದಾರೆ.