ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ಉದ್ದೇಶಿಸಿರುವ ಹೊಸ ವಕ್ಫ್ ಮಸೂದೆ ಕುರಿತಂತೆ ಜಂಟಿ ಸಂಸದೀಯ ಸಮಿತಿ ಮುಂದೆ ಇಂದು ನಾಸಿಕ್‌ನ ಪ್ರಧಾನ ಅರ್ಚಕರು, ಮೂವರು ಖ್ಯಾತ ವಕೀಲರು ಮತ್ತು ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ಉದ್ದೇಶಿಸಿರುವ ಹೊಸ ವಕ್ಫ್ ಮಸೂದೆ ಕುರಿತಂತೆ ಜಂಟಿ ಸಂಸದೀಯ ಸಮಿತಿ ಮುಂದೆ ಇಂದು ನಾಸಿಕ್‌ನ ಪ್ರಧಾನ ಅರ್ಚಕರು, ಮೂವರು ಖ್ಯಾತ ವಕೀಲರು ಮತ್ತು ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಸಭೆ ಸೇರಲಿರುವ ಸಮಿತಿಯು ಜಾಮಿಯತ್ ಉಲೇಮ ಐ ಹಿಂದ್, ದೆಹಲಿ, ಗೋವಾ ಮೂಲದ ಸನಾತನ ಸಂಸ್ಥೆಗಳ ಅಭಿಪ್ರಾಯವನ್ನು ಆಲಿಸಲಿದೆ.
ಬಿಜೆಪಿಯ ಜಗದಾಂಬಿಕಾ ಪಾಲ್ ನೇತೃತ್ವದ ಸಮಿತಿಯ ಎದುರು ನಾಸಿಕ್‌ನ ಕಲಾರಾಂ ದೇವಸ್ಥಾನದ ಪ್ರಧಾನ ಅರ್ಚಕ ಮಹಾಂತ್ ಸುಧೀರ್‌ದಾಸ್ ಮಹಾರಾಜ್, ವಕೀಲರಾದ ಅಶ್ವಿನಿ ಉಪಾಧ್ಯಾಯ, ವಿಷ್ಣು ಶಂಕರ್ ಜೈನ್ ಮತ್ತು ಅಮೃತಾ ಸಚ್‌ದೇವ್ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.
ಸಚ್‌ದೇವ್ ಅವರು ಗೋವಾದ ಹಿಂದೂ ಜಾಗೃತಿ ಸಮಿತಿಯನ್ನು ಪ್ರತಿನಿಧಿಸಲಿದ್ದಾರೆ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಕ್ಷಕ್ಷ ಅನ್ವರ್ ಮಾಣಿಪ್ಪಾಡಿ ಸಹ ಕಾನೂನು ರಚನೆಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವವರ ಪಟ್ಟಿಯಲ್ಲಿದ್ದಾರೆ.
ಮಸೂದೆಗೆ ಸಂಬಂಧಿಸಿದ ತಮ್ಮ ದೃಷ್ಟಿಕೋನಗಳಿಗೆ ಬೆಂಬಲವನ್ನು ಹೆಚ್ಚಿಸಲು ಪ್ರತಿಸ್ಪರ್ಧಿ ಗುಂಪುಗಳು ಪ್ರಾರಂಭಿಸಿದ ಕ್ಯಾಂಪೇನ್‌ಗಳ ಮಧ್ಯೆಯೂ ಉಭಯ ಸದನಗಳ ಜಂಟಿ ಸಮಿತಿಯು 1.2 ಕೋಟಿ ಇಮೇಲ್ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ.
ಮಸೂದೆ ಬೆಂಬಲಿಸಿ ದಾಖಲೆಗಳ ಸಮೇತ 75,000 ಪ್ರತಿಕ್ರಿಯೆಗಳು ಸಹ ಬಂದಿವೆ. ಹೀಗಾಗಿ, ಸಮಿತಿಯು ಲೋಕಸಭೆಯಿಂದ ಹೆಚ್ಚುವರಿ ಸಿಬ್ಬಂದಿಗೆ ಬೇಡಿಕೆ ಇಡಲಿದೆ.
ವಕ್ಫ್ ಮಂಡಳಿಯ ದಾಖಲೆಗಳ ಡಿಜಿಟಲೀಕರಣ, ಹೆಚ್ಚು ಕಠಿಣವಾದ ಆಡಿಟಿಂಗ್ ಪ್ರಕ್ರಿಯೆಗಳು, ಅತಿಕ್ರಮಣಗಳನ್ನು ಎದುರಿಸಲು ವರ್ಧಿತ ಕಾನೂನು ಕ್ರಮಗಳು ಮತ್ತು ವಕ್ಫ್ ನಿರ್ವಹಣೆಯ ವಿಕೇಂದ್ರೀಕರಣ ಸೇರಿದಂತೆ ವಕ್ಫ್ ತಿದ್ದುಪಡಿ ಮಸೂದೆಯ ಪ್ರಮುಖ ಅಂಶಗಳನ್ನು ಸಮಿತಿಯು ಈ ಸಮಾಲೋಚನೆಗಳ ಮೂಲಕ ಪರಿಶೀಲಿಸುತ್ತದೆ.