ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸದ ಕುರಿತು ಪತ್ರಿಕೆಯು ಕಳೆದ ವಾರ ನಿರ್ಧಾರ ತೆಗೆದುಕೊಂಡ ಬೆನ್ನಲ್ಲೇ, ಸುಮಾರು 2 ಲಕ್ಷ ಮಂದಿ 'ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯ ಚಂದಾದಾರಿಕೆಯನ್ನು ರದ್ದುಗೊಳಿಸಿದ್ದಾರೆ.
ಪತ್ರಿಕೆಯು ಈಗಾಗಲೇ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದು, ಇದರ ಮಧ್ಯದಲ್ಲೇ ದೊಡ್ಡ ಸಂಖ್ಯೆಯಲ್ಲಿ ಚಂದಾದಾರಿಕೆ ಹಿಂದೆ ಸರಿದಿರುವುದು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಕಳೆದ ವರ್ಷದ ಅಂಕಿಅಂಶದ ಪ್ರಕಾರ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು 25 ಲಕ್ಷ ಚಂದಾದಾರಿಕೆ ಹೊಂದಿದ್ದು, ಇದರಲ್ಲಿ ದೊಡ್ಡ ಸಂಖ್ಯೆಯಲ್ಲಿ ಡಿಜಿಟಲ್ ಆವೃತ್ತಿಯ ಚಂದಾದಾರಾಗಿದ್ದರು. ಪ್ರಸರಣ ಸಂಖ್ಯೆಯಲ್ಲಿ 'ನ್ಯೂಯಾರ್ಕ್ ಟೈಮ್ಸ್', 'ವಾಲ್ ಸ್ಟ್ರೀಟ್ ಜರ್ನಲ್', ಪತ್ರಿಕೆಯು ಮೊದಲ ಎರಡು ಸ್ಥಾನಗಳಲ್ಲಿದೆ.
ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಪತ್ರಿಕೆಯ ವಕ್ತಾರೆ ಒಲಿವಿಯಾ ಪೀಟರ್‌ಸನ್ ನಿರಾಕರಿಸಿದರು.